ನವದೆಹಲಿ(ಡಿ.9): ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ರಾಜಕೀಯ ಎಂಟ್ರಿ ಕೊಡಲಿದ್ದಾರೆ ಅನ್ನೋ ಮಾತು ಹಿಂದಿನಿಂದಲೂ ಕೇಳಿ ಬರುತ್ತಿದೆ. ಇದೀಗ ಗಂಭೀರ್ ವಿದಾಯ ಹೇಳುತ್ತಿದ್ದಂತೆ ಈ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ತವರಿನ ಮೈದಾನದಲ್ಲಿ ಆಂಧ್ರಪ್ರದೇಶ ವಿರುದ್ಧ ಅಂತಿಮ ರಣಜಿ ಪಂದ್ಯ ಆಡಿದ ಬಳಿಕ ಮಾತನಾಡಿದ ಗಂಭೀರ್, ರಾಜಕೀಯ ಪ್ರವೇಶ ಕುರಿತು ಮನಬಿಚ್ಚಿ ಮಾತನಾಡಿದರು. 2019ರ ಚುನಾವಣೆಗೆ ಸ್ಪರ್ಧೀಸುತ್ತೀರಾ ಅನ್ನೋ ಪ್ರಶ್ನೆಗೆ ಗಂಭೀರ್, ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ಕೆಲ ವಿಚಾರದ ಕುರಿತು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಇದರಿಂದ ನಾನು ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದೇನೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ವಿಚಾರ ನನ್ನ ಗಮನಕ್ಕೂ ಬಂದಿದೆ. ಆದರೆ ನಾನು ರಾಜಕೀಯ ಪ್ರವೇಶಿಲ್ಲ. ಕೋಚಿಂಗ್ ಸೇರಿದೆಂತೆ ಇತರ ಕ್ರಿಕೆಟ್ ಜವಾಬ್ದಾರಿ ನಿರ್ವಹಿಸಲು ಬಯಸುತ್ತೇನೆ ಎಂದು ಗಂಭೀರ್ ಹೇಳಿದ್ದಾರೆ.

ಎಸಿ ರೂಂನಲ್ಲಿ ಕುಳಿತು ಕಮೆಂಟರಿ ಹೇಳುವುದನ್ನ ನಾನು ಇಷ್ಟಪಡುವುದಿಲ್ಲ. ಕೋಚಿಂಗ್ ಅವಕಾಶ ದೊರೆತರೆ ಸ್ವೀಕರಿಸುತ್ತೇನೆ. ಕೋಚಿಂಗ್‌ನಲ್ಲಿ ಎಚ್ಚರ ಮಟ್ಟಿಗೆ ಯಶಸ್ವಿಯಾಗುತ್ತೇನೆ ಅನ್ನೋದು ತಿಳಿದಿಲ್ಲ. ಆದರೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.