ಭಾರತದ ವಿಶ್ವಕಪ್ ಸೋಲಿಗೆ ಸ್ಪೋಟಕ ಕಾರಣ ಬಿಚ್ಚಿಟ್ಟ ಮಾಜಿ ಕೋಚ್ ರವಿಶಾಸ್ತ್ರಿ
ಟೀಂ ಇಂಡಿಯಾ ವಿಶ್ವಕಪ್ ಗೆಲ್ಲದೇ ಇರುವ ರಹಸ್ಯ ಹೊರಹಾಕಿದ ರವಿಶಾಸ್ತ್ರಿ
2013ರ ಬಳಿಕ ಐಸಿಸಿ ಟ್ರೋಫಿ ಗೆಲ್ಲಲು ಟೀಂ ಇಂಡಿಯಾ ವಿಫಲ
ಟೀಂ ಇಂಡಿಯಾ ವೈಫಲ್ಯದ ಹಿಂದಿನ ಸೀಕ್ರೇಟ್ ಬಿಚ್ಚಿಟ್ಟ ಶಾಸ್ತ್ರಿ
ಬೆಂಗಳೂರು: 2019 ಮತ್ತು 2021ರ ವಿಶ್ವಕಪ್ ಸೋಲು ಭಾರತೀಯ ಕ್ರೀಡಾಭಿಮಾನಿಗಳ ಹೃದಯವನ್ನ ಛಿದ್ರ ಛಿದ್ರಗೊಳಿಸಿತ್ತು. ಟ್ರೋಫಿ ಗೆಲುವಿನ ಆಸೆ ನುಚ್ಚುನೂರಾಗಿತ್ತು. ಭಾವನೆಗಳೇ ಬತ್ತಿಹೋಗಿದ್ವು. ವಿಶ್ವವನ್ನೇ ಗೆದ್ದವರು ವಿಶ್ವದ ಮುಂದೆ ಬೆತ್ತಲಾಗಿದ್ವಿ. 2019ರ ಒನ್ಡೇ ವಿಶ್ವಕಪ್ ಸೋತು 3 ವರ್ಷಗಳೇ ಉರುಳಿದಿವೆ. ಇನ್ನು ಟಿ20 ವಿಶ್ವಕಪ್ನಲ್ಲಿ ಹೀನಾಯ ಮುಗ್ಗರಿಸಿ ವರ್ಷವೇ ಕಳೆದಿದೆ. ಈಗ ಎರಡು ಐಸಿಸಿ ಟ್ರೋಫಿಗಳ ಸೋಲಿಗೆ ಕಾರಣ ಏನು ಅನ್ನೋ ಸ್ಪೋಟಕ ಸಂಗತಿಯನ್ನ ಮಾಜಿ ಕೋಚ್ ರವಿಶಾಸ್ತ್ರಿ ಬಹಿರಂಗಪಡಿಸಿದ್ದಾರೆ.
ಆಲ್ರೌಂಡರ್ ಕೊರತೆನೇ ವಿಶ್ವಕಪ್ ಸೋಲಿಗೆ ಕಾರಣ:
ಭಾರತ 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದೆ ಕೊನೆ. ಆ ಬಳಿಕ ಯಾವೊಂದು ಐಸಿಸಿ ಟ್ರೋಫಿ ಭಾರತ ಜಯಿಸಿಲ್ಲ. ಕಳೆದೆರಡು ವಿಶ್ವಕಪ್ನಲ್ಲಿ ಇದಕ್ಕೆ ಉತ್ತಮ ಅವಕಾಶವಿದ್ರು ಕನಸು ಕಮರಿತ್ತು. ಸದ್ಯ 2019 ಏಕದಿನ ಮತ್ತು 2021ರ ಟಿ20 ವಿಶ್ವಕಪ್ ಸೋಲಿಗೆ ಉತ್ತಮ ಆಲ್ರೌಂಡರ್ ಕೊರತೆನೇ ಕಾರಣ ಎಂದು ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಹೌದು, ವಿಶ್ವಕಪ್ನಂತ ದೊಡ್ಡ ಟೂರ್ನಿಗಳಲ್ಲಿ ಹಾರ್ದಿಕ್ ಪಾಂಡ್ಯ ಇಲ್ಲದೇ ತಂಡ ಮುನ್ನಡೆಸಿದ್ದು ಭಾರತ ತಂಡದ ಮೇಲೆ ರಿಸಲ್ಟ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಯಾಕಂದ್ರೆ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಬೌಲಿಂಗ್ ಮಾಡಲು ಅಗ್ರ 6 ರಲ್ಲಿ ಯಾರೂ ಇರ್ಲಿಲ್ಲ. ಇದು ದೊಡ್ಡ ಸಮಸ್ಯೆಯಾಯ್ತು. ಆಯ್ಕೆಗಾರರಿಗೆ ಹುಡುಕಲು ಹೇಳಿದ್ರು, ಯಾರನ್ನ ಹುಡುಕಿ ಕೊಡ್ಲಿಲ್ಲ ಎಂದು ಆಯ್ಕೆ ಸಮಿತಿ ವಿರುದ್ಧ ರವಿಶಾಸ್ತ್ರಿ ಅಸಮಾಧಾನ ಹೊರಹಾಕಿದ್ದಾರೆ. ಒಟ್ಟಿನಲ್ಲಿ ವಿಶ್ವಕಪ್ ಸೋತಿದ್ದು ಸೋತಾಗಿದೆ. ಶಾಸ್ತ್ರಿಯು ಸೋಲಿಗೆ ಕಾರಣ ರಿವೀಲ್ ಮಾಡಿದ್ದಾರೆ. ಇನ್ನಾದ್ರು ಈ ಮಿಸ್ಟೇಕ್ಸ್ ತಿದ್ದಿಕೊಂಡು, ಮುಂಬರೋ ವಿಶ್ವಕಪ್ಗಳನ್ನಾದ್ರು ಭಾರತ ತಂಡ ಗೆದ್ದು ಚರಿತ್ರೆ ಸೃಷ್ಟಿಸಲಿ.
T20 World Cup: ಕೊಹ್ಲಿಯನ್ನ ಟಾರ್ಗೆಟ್ ಮಾಡಿದ್ದಾರೆ ಬಿಗ್ಬಾಸ್ಗಳು?
2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್, ಸುರೇಶ್ ರೈನಾ ಅವರಂತಹ ಆಲ್ರೌಂಡರ್‌ಗಳಿದ್ದರು. ಇನ್ನು ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್ ಕೂಡಾ ಕೆಲ ಓವರ್‌ಗಳನ್ನು ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದರು. ಆದರೆ 2019 ಹಾಗೂ 2021ರ ವಿಶ್ವಕಪ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಇದ್ದರೂ ಸಹಾ ಪರಿಪೂರ್ಣ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರಲಿಲ್ಲ. ಇದು ಟೀಂ ಇಂಡಿಯಾ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ನವೆಂಬರ್ 13ರ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ತನ್ನೆಲ್ಲಾ ನ್ಯೂನ್ಯತೆಗಳನ್ನು ಬದಿಗೊತ್ತಿ ಎರಡನೇ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತ ಜಯಿಸಲಿ ಎನ್ನುವುದು ಕೋಟ್ಯಾಂತರ ಅಭಿಮಾನಿಗಳ ಹಾರೈಕೆಯಾಗಿದೆ.