‘‘ಪಿಚ್ ತುಸು ನಿಧಾನವಾಗಿತ್ತು ಎಂದು ಅವರೆಲ್ಲಾ ಕಾರಣ ಹೇಳಿದರು. ಆದರೆ ಅಷ್ಟೊಂದು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವರು ಇಂತಹ ಕಾರಣ ನೀಡುವುದು ಸರಿಯಲ್ಲ’’

ಪುಣೆ(ಮೇ.14): ಕಿಂಗ್ಸ್ ಇಲೆವೆನ್ ಪಂಜಾಬ್‌'ಗೆ ಪ್ಲೇ-ಆಫ್ ಸ್ಥಾನ ಕೈತಪ್ಪಲು ವಿದೇಶಿ ಆಟಗಾರರೇ ಕಾರಣ ಎಂದು ಪಂಜಾಬ್ ತಂಡದ ಮುಖ್ಯ ಕೋಚ್ ವೀರೇಂದ್ರ ಸೆಹ್ವಾಗ್ ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪುಣೆ ವಿರುದ್ಧ ಹೀನಾಯ ಸೋಲಿನ ಬಳಿಕ ಮಾತನಾಡಿದ ಅವರು, ‘‘ನನಗೆ ತುಂಬಾ ಬೇಸರವಾಗಿದೆ. ಯಾವುದೇ ವಿದೇಶಿ ಆಟಗಾರ ಜವಾಬ್ದಾರಿ ಅರಿತು 12-15 ಓವರ್ ಬ್ಯಾಟಿಂಗ್ ಮಾಡಲು ಪ್ರಯತ್ನಿಸಲಿಲ್ಲ. ಯಾರಾದರೂ ಒಬ್ಬರು ಕ್ರೀಸ್‌'ನಲ್ಲಿ ನೆಲೆಯೂರಬೇಕು ಎನ್ನುವ ಕನಿಷ್ಠ ಸಮಯಪ್ರಜ್ಞೆ ಅವರಲ್ಲಿ ಇರದೆ ಹೋಗಿದ್ದು ನನಗೆ ಅಚ್ಚರಿ ಮೂಡಿಸಿತು’’ ಎಂದು ಸೆಹ್ವಾಗ್ ಹೇಳಿದ್ದಾರೆ.

‘‘ಪಿಚ್ ತುಸು ನಿಧಾನವಾಗಿತ್ತು ಎಂದು ಅವರೆಲ್ಲಾ ಕಾರಣ ಹೇಳಿದರು. ಆದರೆ ಅಷ್ಟೊಂದು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡುವ ಅವರು ಇಂತಹ ಕಾರಣ ನೀಡುವುದು ಸರಿಯಲ್ಲ’’ ಎಂದರು.