18 ವರ್ಷದ ಭಾರತೀಯ ಚೆಸ್ ಆಟಗಾರ ಡಿ. ಗುಕೇಶ್, ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿ ವಿಶ್ವ ಚಾಂಪಿಯನ್ ಆದ ಸುದ್ದಿಗೆ ವಿದೇಶಿ ಮಾಧ್ಯಮವೊಂದು 'ಸಂಬಾರ್ ಔಟ್‌ವಿಟ್ಸ್ ಚೌ ಮೈನ್' ಎಂಬ ಜನಾಂಗೀಯ ಹೆಡ್ಡಿಂಗ್ ನೀಡಿ ಟೀಕೆಗೆ ಗುರಿಯಾಗಿದೆ. ಈ ಹೆಡ್ಡಿಂಗ್ ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದ್ದು, ಕ್ರೀಡಾ ಸಾಧನೆಯನ್ನು ಜನಾಂಗೀಯ ಹಿನ್ನೆಲೆಯಲ್ಲಿ ವರದಿ ಮಾಡಿರುವುದಕ್ಕೆ ಭಾರಿ ಟೀಕೆ ವ್ಯಕ್ತವಾಗಿದೆ.
ಚೆನ್ನೈ ಮೂಲದ 18 ರ ಹರೆಯದ ಡಿ ಗುಕೇಶ್ ಅವರು ಎಳೆ ವಯಸ್ಸಿನಲ್ಲಿಯೇ ಕಿರಿಯ ಚೆಸ್‌ನ ವಿಶ್ವ ಚಾಂಪಿಯನ್ ಆಗುವ ಮೂಲಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಅವರ ಈ ಸಾಧನೆಯನ್ನು ಎಲ್ಲಾ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ದಿನಪತ್ರಿಕೆಗಳು ಸುದ್ದಿ ಮಾಡಿವೆ. ಆದರೆ ವಿದೇಶದ ಆಂಗ್ಲ ಮಾಧ್ಯಮವೊಂದು ಈ ಸಾಧನೆಯ ಕತೆಗೆ ಚೆಂದದ ಹೆಡ್ಡಿಂಗ್ ನೀಡುವ ಬದಲು ಅದರಲ್ಲೂ ಜನಾಂಗೀಯತೆಯನ್ನು ತೋರಿಸಿ ಭಾರತೀಯರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಡಿ. ಗುಕೇಶ್, ಅವರು ಚೀನಾ ಡಿಂಗ್ ಲಿರೆನ್ ಅವರ ವಿರುದ್ಧ 14 ಸುಧೀರ್ಘ ಗೇಮ್ ಮ್ಯಾರಥಾನ್ ಆಟವಾಡಿ ಗೆಲುವು ದಾಖಲಿಸಿದ್ದರು. ಗುಕೇಶ್ ಅವರ ಗೆಲುವಿಗೆ ವಿಶ್ವದೆಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ ವ್ಯಕ್ತವಾಗುತ್ತಿದೆ. ಆದರೆ ಈಗ ಗುಕೇಶ್ ಹಾಗೂ ಡಿಂಗ್ ಲಿರೆನ್ ಅವರ ಸಂಸ್ಕೃತಿಕ ಹಿನ್ನೆಲೆಯನ್ನು ಇರಿಸಿಕೊಂಡು ಈ ಐತಿಹಾಸಿಕ ವಿಚಾರಕ್ಕೆ ಸುದ್ದಿಗೆ ಹೆಡ್ಡಿಂಗ್ ನೀಡಿರುವುದು ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ.
ವಿದೇಶಿ ಮಾಧ್ಯಮವೊಂದು 'ಸಂಬಾರ್ ಔಟ್‌ವಿಟ್ಸ್ ಚೌ ಮೈನ್' ಎಂದು ಹೆಡ್ಡಿಂಗ್ ನೀಡಿದ್ದರು. ಅಂದರೆ ಸಾಂಬಾರ್ ಎಂಬುದು ಭಾರತವನ್ನು ಭಾರತ ಮೂಲದ ಗುಕೇಶ್ ಅವರನ್ನುಉಲ್ಲೇಖಿಸಿದ್ದಾಗಿದ್ದರೆ, ಇತ್ತ ಚೌ ಮೈನ್ ಎಂದರೆ ಚೀನಾದ ನೂಡಲ್ಸ್ ರೀತಿಯ ತಿನಿಸು, ಹೀಗಾಗಿ ಚೀನಾದ ಡಿಂಗ್ ಲಿರೆನ್ ಅವರನ್ನು ನೂಡಲ್ಸ್‌ಗೆ ಹೋಲಿಸಿ ಸಾಂಬಾರ್ ನೂಡಲ್ಸ್‌ನ್ನು ಸೋಲಿಸಿತ್ತು ಎಂಬ ಅರ್ಥವನ್ನು ನೀಡುವಂತೆ ಹೆಡ್ಡಿಂಗ್ ನೀಡಲಾಗಿದೆ. ಈ ಹೆಡ್ಡಿಂಗ್ ನೋಡಿದ ಜನ ಇದು ಇತಿಹಾಸದಲ್ಲೇ ಅತ್ಯಂತ ಕೆಟ್ಟ ಹೆಡ್‌ಲೈನ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾಕೆ ಇದು ಕೆಟ್ಟ ಹೆಡ್‌ಲೈನ್ ಆಗಿದೆ ಎಂದರೆ ಒಂದು ಕ್ರೀಡಾ ಇತಿಹಾಸ ನಿರ್ಮಾಣವಾಗಿರುವುದನ್ನು ಈ ರೀತಿ ಜನಾಂಗೀಯ ಹಿನ್ನೆಲೆ ನೀಡಿ ಸುದ್ದಿ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಕೆಲವರು ಸಂಬಾರನ್ನು ನಾರ್ತ್ ಇಂಡಿಯಾ ಸ್ಟೈಲ್‌ನಲ್ಲಿ ಸ್ಪೆಲ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಯಾಕೆ ವಡಾ ಬೀಟ್ಟಿಂಗ್ ಮೋಮೊಸ್ ಎಂದು ಹೆಟ್ಟಿಂಗ್ ಕೊಟ್ಟಿಲ್ಲ ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಆದರೆ ಇಂತಹ ಹೆಡ್ಡಿಂಗೊಂದು ಸಿಂಗಾಪುರದಿಂದ ಬಂದಿರುವುದು ಬೇಸರದ ವಿಚಾರ ಏಕೆಂದರೆ ಅಲ್ಲಿನ ಜನಸಂಖ್ಯೆಯ ಕಾಲುಭಾಗ ದಕ್ಷಿಣ ಭಾರತೀಯರಿದ್ದಾರೆ. ತಮಿಳು ಅಲ್ಲಿನ ಒಂದು ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ನಮ್ಮ ಮೀಡಿಯಾಗಳು ಪ್ರತಿಯೊಂದನ್ನು ಹೀಗೆ ಲೇಬಲ್ ಮಾಡುತ್ತವೆ ಅವರಿಗೆ ಮೂಲಭೂತವಾದ ಸೂಕ್ಷ್ಮತೆಗಳೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಯಾರು ಈ ರೀತಿಯ ರಾಸಿಸ್ಟ್ ಹೆಡ್ಡಿಂಗ್ ನೀಡಿದವರು ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್ ಶಿಪ್‌ನಲ್ಲಿ ಭಾರತದ ಚೆನ್ನೈ ಮೂಲದ ಗುಕೇಶ್ ಅವರು ಚೀನಾ ಡಿಂಗ್ ಲಿರೆನ್ ಅವರನ್ನು 7.5-6.5ರಿಂದ ಸೋಲಿಸುವ ಮೂಲಕ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.
