ಬೈಚುಂಗ್ ಭುಟಿಯಾ, ಜೋಸ್ ಬಾರಿಟ್ಟೋ, ಜೋ-ಪೌಲ್ ಆ್ಯಂಚರಿ, ಐಆ್ಯಮ್ ವಿಜಯನ್ ಸೌಹಾರ್ದಯುತ ಪಂದ್ಯದಲ್ಲಿ ಭಾಗವಹಿಸುವುದನ್ನು ಖಚಿತ ಪಡಿಸಿದ್ದಾರೆ.

ಕೋಲ್ಕತಾ(ಜೂ.10): ಅರ್ಜೆಂಟೀನಾ ಫುಟ್'ಬಾಲ್ ದಂತಕಥೆ ಡಿಯಾಗೋ ಮರಡೋನಾ ಎರಡನೇ ಬಾರಿಗೆ ಆಗಮಿಸುತ್ತಿದ್ದು, ದಾದ ಅವರನ್ನು ಭೇಟಿಯಾಗಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಕೋಲ್ಕತಾಕ್ಕೆ ತೆರಳಲು ಹಾಗೂ ಕೋಲ್ಕತಾ ಮಹಾರಾಜ, ದಾದಾ (ಸೌರವ್ ಗಂಗೂಲಿ) ಅವರನ್ನು ಭೇಟಿಯಾಗಲು 100 ದಿನ ಬಾಕಿ ಇದೆ’ ಎಂದು ಮರಡೋನಾ ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

ಜೂನಿಯರ್ ವಿಶ್ವ ಕಪ್‌ಗೆ ಪ್ರಚಾರ ನೀಡುವ ಸಲುವಾಗಿ ಮರಡೋನಾ ಸೆ.18ರಿಂದ 20ರ ತನಕ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇದೇ ವೇಳೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಸೇರಿದಂತೆ ಭಾರತದ ಫುಟ್ಬಾಲ್ ಹಾಗೂ ಕ್ರಿಕೆಟ್ ಆಟಗಾರರು, ಬಾಲಿವುಡ್ ಮತ್ತು ಟಾಲಿವುಡ್ ನಟರನ್ನೊಳಗೊಂಡ ಸೆಲೆಬ್ರಿಟಿಗಳ ತಂಡದೊಂದಿಗೆ ಕೂಡಿಕೊಂಡು ಮರಡೋನಾ ಸೌಹಾರ್ದತಯುತ ಫುಟ್ಬಾಲ್ ಪಂದ್ಯವೊಂದನ್ನು ಸಹ ಆಡಲಿದ್ದಾರೆ.

ಬೈಚುಂಗ್ ಭುಟಿಯಾ, ಜೋಸ್ ಬಾರಿಟ್ಟೋ, ಜೋ-ಪೌಲ್ ಆ್ಯಂಚರಿ, ಐಆ್ಯಮ್ ವಿಜಯನ್ ಸೌಹಾರ್ದಯುತ ಪಂದ್ಯದಲ್ಲಿ ಭಾಗವಹಿಸುವುದನ್ನು ಖಚಿತ ಪಡಿಸಿದ್ದಾರೆ. ಮನೋಜ್ ತಿವಾರಿ, ದೀಪ್'ದಾಸ್ ಗುಪ್ತಾ, ರಣವೀರ್ ಸಿಂಗ್ ಕೂಡಾ ಫುಟ್'ಬಾಲ್ ಪಂದ್ಯ ಆಡಲಿದ್ದಾರೆ ಎಂದು ಪಂದ್ಯದ ಆಯೋಜಕರು ತಿಳಿಸಿದ್ದಾರೆ.