ಟ್ಯುರಿನ್(ಇಟಲಿ): ಇಟಲಿಯನ್ ಫುಟ್ಬಾಲ್ ಲೀಗ್‌ನಲ್ಲಿ ಭಾನುವಾರ ನಡೆದ ಯುವೆಂಟುಸ್ ಹಾಗೂ ಸಸ್ಸುಲೋ ತಂಡಗಳ ನಡುವಿನ ಪಂದ್ಯ ಆಘಾತಕಾರಿ ಪ್ರಸಂಗಕ್ಕೆ ಸಾಕ್ಷಿಯಾಯಿತು. ಯುವೆಂಟುಸ್ ತಂಡದ

ಬ್ರೆಜಿಲ್ ಆಟಗಾರ ಡಗ್ಲಾಸ್ ಕೋಸ್ಟಾ, ಎದುರಾಳಿ ತಂಡದ ಫೆಡ್ರಿಕೋ ಡಿ ಫ್ರಾನ್ಸಿಸ್ಕೋ ತಲೆಗೆ ಡಿಕ್ಕಿ ಹೊಡೆದು, ಬಳಿಕ ಅವರ ಮುಖಕ್ಕೆ ಉಗುಳಿ ಅಸಭ್ಯವಾಗಿ ವರ್ತಿಸಿದರು. ರೆಫ್ರಿ ರೆಡ್ ಕಾರ್ಡ್ ನೀಡಿ ಡಗ್ಲಾಸ್ ಕೋಸ್ಟಾರನ್ನು ಮೈದಾನದಿಂದ ಹೊರಗಟ್ಟಿದರು. ಅವರಿಗೆ ದೊಡ್ಡ ಮೊತ್ತದ ದಂಡ ಹಾಗೂ ಕೆಲ ಪಂದ್ಯಗಳ ನಿಷೇಧ ವಿಧಿಸುವ ಸಾಧ್ಯತೆ ಇದೆ. ಫುಟ್ಬಾಲ್ ಆಟಗಾರರು ಮಿತಿ ಮೀರಿ ವರ್ತಿಸುವುದು ಹೆಚ್ಚುತ್ತಿದೆ ಎಂದು ಫುಟ್ಬಾಲ್ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಅಸಭ್ಯವಾಗಿ ವರ್ತಿಸಿದ್ದಕ್ಕೆ ಡಗ್ಲಾಸ್ ಕೋಸ್ಟಾ ಯುವೆಂಟುಸ್ ಅಭಿಮಾನಿಗಳ ಕ್ಷಮೆಯಾಚಿಸಿದ್ದಾರೆ.