ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ನೂತನ ಪಟ್ಟಿ ಬಿಡುಗಡೆಗೊಳಿಸಿದ್ದು, ಕಿದಾಂಬಿ ಶ್ರೀಕಾಂತ್ 8ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಇನ್ನು 4 ಸ್ಥಾನಗಳ ಜಿಗಿತ ಕಂಡಿರುವ ಎಚ್.ಎಸ್. ಪ್ರಣಯ್ 15ನೇ ಸ್ಥಾನಕ್ಕೇರಿದ್ದಾರೆ.

ನವದೆಹಲಿ(ಸೆ.29): ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಭಾರತೀಯ ಶಟ್ಲರ್‌'ಗಳ ಪ್ರಾಬಲ್ಯ ಮುಂದುವರಿದಿದ್ದು, ಪುರುಷರ ಶ್ರೇಯಾಂಕ ಪಟ್ಟಿಯ ಅಗ್ರ 20ರಲ್ಲಿ ಭಾರತದ ಐವರು ಸ್ಥಾನ ಪಡೆದಿದ್ದಾರೆ.

ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ ನೂತನ ಪಟ್ಟಿ ಬಿಡುಗಡೆಗೊಳಿಸಿದ್ದು, ಕಿದಾಂಬಿ ಶ್ರೀಕಾಂತ್ 8ನೇ ಸ್ಥಾನ ಕಾಯ್ದುಕೊಂಡಿದ್ದಾರೆ. ಇನ್ನು 4 ಸ್ಥಾನಗಳ ಜಿಗಿತ ಕಂಡಿರುವ ಎಚ್.ಎಸ್. ಪ್ರಣಯ್ 15ನೇ ಸ್ಥಾನಕ್ಕೇರಿದ್ದಾರೆ. ಸಾಯಿ ಪ್ರಣೀತ್ 17ನೇ ಸ್ಥಾನದಲ್ಲಿ ಮುಂದುವರಿದರೆ, ಸಮೀರ್ ವರ್ಮಾ 19ನೇ ಸ್ಥಾನಕ್ಕೇರಿದ್ದಾರೆ.

ಇನ್ನು ಅಜಯ್ ಜಯರಾಮನ್ 20ನೇ ಸ್ಥಾನದಲ್ಲಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಸಿಂಧು ಎರಡನೇ ಸ್ಥಾನದಲ್ಲಿದ್ದಾರೆ. ಮತ್ತೋರ್ವ ಶಟ್ಲರ್ ಸೈನಾ ನೆಹ್ವಾಲ್ 12 ಸ್ಥಾನದಲ್ಲಿದ್ದಾರೆ. ಹಾಗೆಯೇ ಮಿಶ್ರ ಡಬಲ್ಸ್'ನಲ್ಲಿ ಸಿಕ್ಕಿ ರೆಡ್ಡಿ ಹಾಗೂ ಪ್ರಣವ್ ಜರ್ರಿ ಛೋಪ್ರಾ ಜೋಡಿ ಎರಡು ಸ್ಥಾನ ಏರಿಕೆ ಕಂಡು 17ನೇ ಶ್ರೇಯಾಂಕಕ್ಕೆ ಲಗ್ಗೆಯಿಟ್ಟಿದ್ದಾರೆ.