ಹೊಸ ಇತಿಹಾಸ ನಿರ್ಮಿಸಿದ ಆಫ್ಘಾನ್ ಬೌಲರ್..! ಇವರು ರಶೀದ್ ಖಾನ್..!

First Test Wicket For Each Team
Highlights

ಐಪಿಎಲ್’ನಲ್ಲಿ ಎದುರಾಳಿ ಬ್ಯಾಟ್ಸ್’ಮನ್’ಗಳ ನಿದ್ದೆಗೆಡಿಸಿದ್ದ ರಶೀದ್ ಖಾನ್ ಮೊದಲ ವಿಕೆಟ್ ಕಬಳಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈ ಸಾಧನೆ ಮಾಡಲು 19 ವರ್ಷದ ರಶೀದ್ ಖಾನ್’ಗೆ ಸಾಧ್ಯವಾಗಲಿಲ್ಲ. ಆದರೆ ಆಫ್ಘಾನ್ ವೇಗಿ ಚೊಚ್ಚಲ ವಿಕೆಟ್ ಪಡೆದ ಸಾಧನೆ ಮಾಡಿದರು.

ಬೆಂಗಳೂರು[ಜೂ.14]: ಆಫ್ಘಾನಿಸ್ತಾನ ತಂಡವು ಭಾರತದ ವಿರುದ್ಧ ಚೊಚ್ಚಲ ಟೆಸ್ಟ್  ಪಂದ್ಯವನ್ನಾಡುವ ಮೂಲಕ ಟೆಸ್ಟ್ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದೆ. ಈ ಮೂಲಕ ಟೆಸ್ಟ್ ಮಾನ್ಯತೆ ಪಡೆದ 12ನೇ ರಾಷ್ಟ್ರ ಬಲಿಷ್ಠ ಭಾರತದೆದುರು ಬೆಂಗಳೂರಿನಲ್ಲಿ ಸೆಣಸುತ್ತಿದೆ.
ಐಪಿಎಲ್’ನಲ್ಲಿ ಎದುರಾಳಿ ಬ್ಯಾಟ್ಸ್’ಮನ್’ಗಳ ನಿದ್ದೆಗೆಡಿಸಿದ್ದ ರಶೀದ್ ಖಾನ್ ಮೊದಲ ವಿಕೆಟ್ ಕಬಳಿಸಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈ ಸಾಧನೆ ಮಾಡಲು 19 ವರ್ಷದ ರಶೀದ್ ಖಾನ್’ಗೆ ಸಾಧ್ಯವಾಗಲಿಲ್ಲ. ಆದರೆ ಆಫ್ಘಾನ್ ವೇಗಿ ಚೊಚ್ಚಲ ವಿಕೆಟ್ ಪಡೆದ ಸಾಧನೆ ಮಾಡಿದರು.

ಈ ಪಂದ್ಯ ಹಲವು ದಾಖಲೆಗಳಿಗೂ ಸಾಕ್ಷಿಯಾಗಿದೆ. ಇವುಗಳ ಪೈಕಿ ಆಫ್ಘಾನಿಸ್ತಾನದ ಯಾಮಿನ್ ಅಹ್ಮದ್’ಜಾಯ್ ವಿನೂತನ ದಾಖಲೆ ನಿರ್ಮಿಸಿದ್ದಾರೆ. ಹೌದು ಮಧ್ಯಮ ವೇಗಿ ಯಾಮಿನ್ ಅಹ್ಮದ್’ಜಾಯ್ ಆಫ್ಘಾನಿಸ್ತಾನದ ಪರ ಟೆಸ್ಟ್ ಬೌಲಿಂಗ್ ಮಾಡಿದ ಮೊದಲ ಬೌಲರ್ ಎನ್ನುವ  ದಾಖಲೆಗೂ ಪಾತ್ರರಾದರು. ಇನ್ನು ಆಫ್ಘಾನ್ ಪರ ಟೆಸ್ಟ್ ವಿಕೆಟ್ ಪಡೆದ ಮೊದಲ ಬೌಲರ್ ಎನ್ನುವ ಕೀರ್ತಿಗೂ ಯಾಮಿನ್ ಅಹ್ಮದ್’ಜಾಯ್ ಪಾತ್ರರಾದರು. ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಶಿಖರ್ ಧವನ್ ಅವರ ವಿಕೆಟ್ ಪಡೆಯುಲ್ಲಿ ಯಾಮಿನ್ ಅಹ್ಮದ್’ಜಾಯ್ ಯಶಸ್ವಿಯಾದರು.
ಪ್ರಥಮ ಟೆಸ್ಟ್’ನಲ್ಲಿ ವಿಕೆಟ್ ಕಬಳಿಸಿದ ಬೌಲರ್’ಗಳಿವರು...
ENG: ಆಲ್ಫ್ರೆಡ್ ಶಾ
AUS: ಜಾನ್ ಹಾಡ್ಜ್ಸ್
SA: ಗುಸ್ ಕೆಂಪೀಸ್
WI: ಜಾರ್ಜ್ ಪ್ರಾನ್ಸಿಸ್
NZ: ಟೆಡ್ ಬ್ಯಾಡ್’ಕುಕ್
IND: ಮೊಹಮ್ಮದ್ ನಿಸ್ಸಾರ್
PAK: ಖಾನ್ ಮೊಹಮ್ಮದ್
SL: ಅಶಾಂತ್ ಡಿ ಮೆಲ್
ZIM: ಎಡ್ಡೊ ಬ್ರಾಂಡಿಸ್
BAN: ಹಸಿಬುಲ್ ಹುಸೇನ್
IRE: ಟಿಮ್ ಮುರ್ಟಾಗ್
AFG: ಯಾಮಿನ್ ಅಹ್ಮದ್’ಜಾಯ್

 

loader