ಕ್ರಿಕೆಟ್'ನಲ್ಲಿ ಹೊಸ ಇತಿಹಾಸ ಬರೆದ ಐರ್ಲೆಂಡ್

First day of Ireland's inaugural Test match against Pakistan washed out
Highlights

ಇದೇ ವೇಳೆ  ಬಾಯ್ಡ್  ರ‍್ಯಾಕಿಂಗ್, ಐರ್ಲೆಂಡ್  ಹಾಗೂ ಇಂಗ್ಲೆಂಡ್ ಪರ ಟೆಸ್ಟ್, ಏಕದಿನ ಹಾಗೂ ಟಿ20 ಮೂರೂ ಮಾದರಿಯಲ್ಲಿ ಆಡಿದ ಕೀರ್ತಿಗೆ ಪಾತ್ರರಾ ದರು. 2 ವಿವಿಧ ತಂಡಗಳ ಪರ ಮೂರೂ ಮಾದರಿಯಲ್ಲಿ ಆಡಿದ ವಿಶ್ವದ ಏಕೈಕ ಆಟಗಾರ ಎನ್ನುವ  ದಾಖಲೆ ಬರೆದರು.

ಡ್ಲಬ್ಲಿನ್(ಮೇ.13): ಶನಿವಾರ ಐರ್ಲೆಂಡ್ ಕ್ರಿಕೆಟ್ ತಂಡ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿತು. ಶುಕ್ರವಾರವೇ ಆರಂಭಗೊಳ್ಳಬೇಕಿದೆ. ಪಾಕಿಸ್ತಾನ ವಿರುದ್ಧ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಹೀಗಾಗಿ ಮೊದಲ ದಿನದಾಟ ರದ್ದುಗೊಂಡಿತ್ತು. ಶನಿವಾರ ಟಾಸ್ ಗೆದ್ದು  ಐರ್ಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 
ಚಹಾ ವಿರಾಮದ ವೇಳೆಗೆ ಪಾಕ್ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತ್ತು. ಇದೇ ವೇಳೆ  ಬಾಯ್ಡ್  ರ‍್ಯಾಕಿಂಗ್, ಐರ್ಲೆಂಡ್  ಹಾಗೂ ಇಂಗ್ಲೆಂಡ್ ಪರ ಟೆಸ್ಟ್, ಏಕದಿನ ಹಾಗೂ ಟಿ20 ಮೂರೂ ಮಾದರಿಯಲ್ಲಿ ಆಡಿದ ಕೀರ್ತಿಗೆ ಪಾತ್ರರಾ ದರು. 2 ವಿವಿಧ ತಂಡಗಳ ಪರ ಮೂರೂ ಮಾದರಿಯಲ್ಲಿ ಆಡಿದ ವಿಶ್ವದ ಏಕೈಕ ಆಟಗಾರ ಎನ್ನುವ  ದಾಖಲೆ ಬರೆದರು.

ಮೇ 22ಕ್ಕೆ ಮಹಿಳಾ ಐಪಿಎಲ್ ಪಂದ್ಯ
ನವದೆಹಲಿ: ಮಹಿಳಾ ಐಪಿಎಲ್ ಆರಂಭಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟಿರುವ ಬಿಸಿಸಿಐ, ಇದೇ 22ಕ್ಕೆ ಮಹಿಳಾ ಪ್ರದರ್ಶನ ಟಿ20 ಪಂದ್ಯವನ್ನು ಆಯೋಜಿಸಲು  ನಿರ್ಧರಿಸಿದೆ. ಪ್ಲೇ-ಆಫ್ ಹಂತದ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ಮಹಿಳಾ ಟಿ20 ನಡೆಯಲಿದೆ. ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಪಂದ್ಯ ಮಧ್ಯಾಹ್ನ 2.30ಕ್ಕೆ ಆರಂಭಗೊಳ್ಳಲಿದ್ದು, ನೇರ ಪ್ರಸಾರಗೊಳ್ಳಲಿದೆ ಎಂದು ಬಿಸಿಸಿಐ ಆಡಳಿತ ಸಮಿತಿ ಸದಸ್ಯೆ ಡಯಾನ ಎಡುಲ್ಜಿ ಸ೩ಷ್ಟ ಪಡಿಸಿದ್ರೆದಾ. ಪಂದ್ಯಕ್ಕಾಗಿ 20 ಭಾರತೀಯ ಹಾಗೂ 10 ವಿದೇಶಿ ಆಟಗಾರ್ತಿಯರನ್ನು ಆಯ್ಕೆ ಮಾಡಲು ಬಿಸಿಸಿಐ ಮುಂದಾಗಿದೆ.

loader