ದೇಸಿ ಕ್ರಿಕೆಟಿಗರ ವೇತನ ಶೇ.200ರಷ್ಟು ಹೆಚ್ಚಳ

First class Indian cricketers must get annual retainers now
Highlights

ದೇಸಿ ಪಂದ್ಯಗಳ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಆಟಗಾರರು ಪ್ರತಿ ದಿನಕ್ಕೆ ₹35000 ವೇತನ ಪಡೆದರೆ, ಮೀಸಲು ಆಟಗಾರರು ₹17500 ವೇತನ ಸಂಪಾದಿಸಲಿದ್ದಾರೆ.

ನವದೆಹಲಿ(ಮಾ.08): ಕೊಹ್ಲಿ, ಧೋನಿ ಸೇರಿದಂತೆ ಹಲವು ಕ್ರಿಕೆಟಿಗರ ಬೇಡಿಕೆಯಂತೆ ದೇಸಿ ಆಟಗಾರರ ವೇತನವನ್ನು ಬಿಸಿಸಿಐ ಶೇ.200ರಷ್ಟು ಏರಿಸಿದೆ.

ದೇಸಿ ಪಂದ್ಯಗಳ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಆಟಗಾರರು ಪ್ರತಿ ದಿನಕ್ಕೆ ₹35000 ವೇತನ ಪಡೆದರೆ, ಮೀಸಲು ಆಟಗಾರರು ₹17500 ವೇತನ ಸಂಪಾದಿಸಲಿದ್ದಾರೆ. ಹಿರಿಯ ಆಟಗಾರರು ಮಾತ್ರವಲ್ಲ, ಕಿರಿಯರಿಗೂ ಭಾರೀ ಪ್ರಮಾಣದ ವೇತನ ದೊರೆಯಲಿದೆ. ಅಂಡರ್-23 ವಿಭಾಗದಲ್ಲಿ ಆಡುವ ಹನ್ನೊಂದರಲ್ಲಿ ಕಾಣಿಸಿಕೊಳ್ಳುವ ಆಟಗಾರರಿಗೆ ಪ್ರತಿ ದಿನಕ್ಕೆ ₹17500, ಹೆಚ್ಚುವರಿ ಆಟಗಾರರಿಗೆ ₹8750 ಸಿಗಲಿದೆ

ಇನ್ನು ಅಂಡರ್-19 ಆಡುವ ಹನ್ನೊಂದರಲ್ಲಿ ಕಾಣಿಸಿಕೊಳ್ಳುವ ಆಟಗಾರರಿಗೆ ದಿನಕ್ಕೆ ₹10500, ಮೀಸಲು ಆಟಗಾರರಿಗೆ ₹5250. ಅಂಡರ್-16 ಟೂರ್ನಿಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಆಟಗಾರರಿಗೆ ದಿನಕ್ಕೆ ₹3500, ಮೀಸಲು ಆಟಗಾರರಿಗೆ ₹1750 ದೊರೆಯಲಿದೆ.

loader