ನಾನು 15 ವರ್ಷಗಳಿಂದ ಛತ್ತಾಸಾಲ್ ಸ್ಟೇಡಿಯಂನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ನನಗೆ ಎಲ್ಲರ ಮುಖ ಪರಿಚಯವಿದೆ. ನನ್ನ ಹಾಗೂ ನನ್ನ ಸಹೋದರರ ಮೇಲೆ ಹಲ್ಲೆ ಮಾಡಿದವರ ಮುಖ ಚಹರೆ ಪತ್ತೆಹಚ್ಚಬಲ್ಲೆ ಎಂದು ರಾಣಾ ಹೇಳಿದ್ದಾರೆ.

ನವದೆಹಲಿ(ಡಿ.31): ಕುಸ್ತಿಪಟು ಪ್ರವೀಣ್ ರಾಣಾ ಬೆಂಬಲಿಗರ ಜತೆ ಕಾದಾಟ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್ ಹಾಗೂ ಅವರ ಬೆಂಬಲಿಗರ ವಿರುದ್ಧ ಎಫ್‌'ಐಆರ್ ದಾಖಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಶುಕ್ರವಾರ ಇಲ್ಲಿ ಕಾಮನ್‌'ವೆಲ್ತ್ ಗೇಮ್ಸ್'ಗಾಗಿ ನಡೆದ ಆಯ್ಕೆ ಟ್ರಯಲ್ಸ್ ವೇಳೆ ಸುಶೀಲ್ ಹಾಗೂ ಪ್ರವೀಣ್ ಬೆಂಬಲಿಗರ ನಡುವೆ ಕಿತ್ತಾಟ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐಪಿಸಿ ಸೆಕ್ಷನ್ 341, 323 ಅಡಿಯಲ್ಲಿ ವಿರುದ್ಧ ದೂರು ದಾಖಲಿಸಲಾಗಿದೆ.

ನಾನು 15 ವರ್ಷಗಳಿಂದ ಛತ್ತಾಸಾಲ್ ಸ್ಟೇಡಿಯಂನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ನನಗೆ ಎಲ್ಲರ ಮುಖ ಪರಿಚಯವಿದೆ. ನನ್ನ ಹಾಗೂ ನನ್ನ ಸಹೋದರರ ಮೇಲೆ ಹಲ್ಲೆ ಮಾಡಿದವರ ಮುಖ ಚಹರೆ ಪತ್ತೆಹಚ್ಚಬಲ್ಲೆ ಎಂದು ರಾಣಾ ಹೇಳಿದ್ದಾರೆ.