ಸ್ಮಿತ್ ಗೈರು ಹಾಜರಿಯಲ್ಲಿ ಫಿಂಚ್ 6 ಬಾರಿ ಆಸೀಸ್ ಟಿ20 ತಂಡವನ್ನು ಮುನ್ನೆಡೆಸಿದ್ದಾರೆ.

ಸಿಡ್ನಿ(ಜ.31): ಫೆಬ್ರವರಿಯಿಂದ ಆರಂಭವಾಗುವ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಆಸ್ಟೇಲಿಯಾ ತಂಡದ ಸಾರಥಿಯಾಗಿ ಆರಂಭಿಕ ಬ್ಯಾಟ್ಸ್‌'ಮನ್ ಆ್ಯರನ್ ಫಿಂಚ್ ಆಯ್ಕೆಯಾಗಿದ್ದಾರೆ.

ಮುಂದಿನ ದಿನಗಳಲ್ಲಿ ಆಸೀಸ್ ತಂಡ ಭಾರತ ಪ್ರವಾಸ ಕೈಗೊಳ್ಳಲಿರುವುದರಿಂದ ನಾಯಕ ಸ್ಟೀವನ್ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್‌ಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಫಿಂಚ್‌'ಗೆ ತಂಡದ ಜವಾಬ್ದಾರಿ ವಹಿಸಲಾಗಿದೆ.

ಸದ್ಯ ಫಿಂಚ್, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ನಂತರ ಲಂಕಾ ಸರಣಿಯಲ್ಲಿಯೂ ಫಿಂಚ್ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಸ್ಮಿತ್ ಗೈರು ಹಾಜರಿಯಲ್ಲಿ ಫಿಂಚ್ 6 ಬಾರಿ ಆಸೀಸ್ ಟಿ20 ತಂಡವನ್ನು ಮುನ್ನೆಡೆಸಿದ್ದಾರೆ.