ಭಾರತ-ಒಮಾನ್ ಫುಟ್ಬಾಲ್ ಪಂದ್ಯ ಇಂದು
2022ರಲ್ಲಿ ಕತಾರ್‌ನಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಗೆ ಅರ್ಹತೆಗಿಟ್ಟಿಸಿಕೊಳ್ಳಲು ಸುನಿಲ್ ಚೆಟ್ರಿ ನೇತೃತ್ವದ ಭಾರತ ಫುಟ್ಬಾಲ್ ತಂಡ, ಇಂದು ಬಲಿಷ್ಠ ಓಮನ್ ತಂಡದೆದುರು ಕಾದಾಡಲು ಸಜ್ಜಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಗುವಾಹಟಿ[ಸೆ.05]: ಫಿಫಾ ವಿಶ್ವಕಪ್ 2022ರ ಅರ್ಹತಾ ಸುತ್ತಿನ 2ನೇ ಹಂತದಲ್ಲಿ ಗುರುವಾರ ಸುನಿಲ್ ಚೆಟ್ರಿ ನೇತೃತ್ವದ ಭಾರತ ಫುಟ್ಬಾಲ್ ತಂಡ ಪ್ರಬಲ ಒಮಾನ್ ತಂಡವನ್ನು ಎದುರಿಸಲಿದೆ.
ಖತಾರ್ ಫಿಫಾ ವಿಶ್ವಕಪ್ 2022ರ ಲಾಂಛನ ಅನಾವರಣ!
ಭಾರತ ತಂಡ ‘ಇ’ ಗುಂಪಿನಲ್ಲಿದ್ದು, ಏಷ್ಯಾದ ಬಲಿಷ್ಠ ತಂಡಗಳಾದ ಒಮಾನ್ ಹಾಗೂ ಕತಾರ್ ವಿರುದ್ಧ ಸೆಣಸಲಿದೆ. ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನ ಗುಂಪಿನಲ್ಲಿರುವ ಮತ್ತೆರಡು ತಂಡಗಳಾಗಿವೆ.
ಅಂಡರ್ 17 ಫಿಫಾ ಮಹಿಳಾ ವಿಶ್ವಕಪ್ ಆತಿಥ್ಯ ಭಾರತದ ತೆಕ್ಕೆಗೆ
2ನೇ ಸುತ್ತಿನಲ್ಲಿ ಏಷ್ಯಾದ ಒಟ್ಟು 40 ತಂಡಗಳು ಪಾಲ್ಗೊಳ್ಳುತ್ತಿದ್ದು ತಲಾ 5 ತಂಡಗಳಂತೆ 8 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ತಂಡ ತವರಿನಲ್ಲಿ ಹಾಗೂ ತವರಿನಾಚೆ ಗುಂಪಿನಲ್ಲಿರುವ ಇನ್ನುಳಿದ ತಂಡಗಳ ವಿರುದ್ಧ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳನ್ನು ಆಡಲಿದೆ. ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ 8 ತಂಡಗಳು ಹಾಗೂ 4 ಶ್ರೇಷ್ಠ ರನ್ನರ್-ಅಪ್ ತಂಡಗಳು 3ನೇ ಸುತ್ತಿಗೆ ಪ್ರವೇಶಿಸಲಿವೆ.
ಪಂದ್ಯ ಆರಂಭ: ಸಂಜೆ-7.30
ನೇರ ಪ್ರಸಾರ: ಸ್ಟಾರ್ ಸ್ಫೋರ್ಟ್ಸ್ ಮತ್ತು ಹಾಟ್ ಸ್ಟಾರ್
ಸ್ಥಳ: ಇಂದಿರಾ ಗಾಂಧಿ ಅಥ್ಲೇಟಿಕ್ ಸ್ಟೇಡಿಯಂ.