100ನೇ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿರುವ ಸ್ವಾರೆಜ್ ಈ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕಿಳಿದ ಉರುಗ್ವೆ ಆಟಗಾರರು ಸೌದಿ ಅರೇಬಿಯಾ ಎದುರು ಮೇಲುಗೈ ಸಾಧಿಸಿದ್ದರು.

ರಷ್ಯಾ(ಜೂ.20]: ಲೂಯಿಸ್ ಸ್ವಾರೆಜ್ ಬಾರಿಸಿದ ಗೋಲಿನ ನೆರವಿನಿಂದ ಉರುಗ್ವೆ ತಂಡ ಸೌದಿ ಅರೇಬಿಯಾ ವಿರುದ್ಧ 1-0 ಗೋಲಿನಿಂದ ಮಣಿಸಿ ಗೆಲುವಿನ ನಗೆ ಬೀರಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಂದ್ಯದ 23ನೇ ನಿಮಿಷದಲ್ಲಿ ಲೂಯಿಸ್ ಸ್ವಾರೆಜ್ ಬಾರಿಸಿದ ಏಕೈಕ ಗೋಲು ಉರುಗ್ವೆಯನ್ನು ಪ್ರೀಕ್ವಾರ್ಟರ್ ಹಂತಕ್ಕೇರುವಂತೆ ಮಾಡಿದರೆ, ಸೌದಿ ಅರೇಬಿಯಾದ ಬಹುತೇಕ ಟೂರ್ನಿಯಿಂದ ಹೊರಬಿದ್ದಿದೆ. 100ನೇ ಅಂತಾರಾಷ್ಟ್ರೀಯ ಪಂದ್ಯವಾಡುತ್ತಿರುವ ಸ್ವಾರೆಜ್ ಈ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಆರಂಭದಿಂದಲೂ ಆಕ್ರಮಣಕಾರಿ ಆಟಕ್ಕಿಳಿದ ಉರುಗ್ವೆ ಆಟಗಾರರು ಸೌದಿ ಅರೇಬಿಯಾ ಎದುರು ಮೇಲುಗೈ ಸಾಧಿಸಿದ್ದರು. ಪಂದ್ಯದ

23ನೇ ನಿಮಿಷದಲ್ಲಿ ಸ್ವಾರೆಜ್ ಆಕರ್ಷಕ ಗೋಲು ಸಿಡಿಸಿ ಉರುಗ್ವೆಗೆ 1-0 ಮುನ್ನಡೆ ನೀಡಿದರು. ಕೊನೆವರೆಗೂ ಇದೇ ಮುನ್ನಡೆ ಕಾಯ್ದುಕೊಂಡ ಉರುಗ್ವೆ ಕೊನೆಗೂ ಜಯದ ನಗೆ ಬೀರಿತು. ಉದ್ಘಾಟನಾ ಪಂದ್ಯದಲ್ಲಿ ರಷ್ಯಾದೆದುರು ಮುಗ್ಗರಿಸಿದ್ದ ಸೌದಿ ಅರೇಬಿಯಾ, ಇದೀಗ ಎರಡನೇ ಪಂದ್ಯದಲ್ಲೂ ಸೋಲಿನ ಕಹಿಯುಂಡಿದೆ.