ಬ್ರೆಜಿಲ್ ಬದಲು ಫ್ರಾನ್ಸ್ ತಂಡಕ್ಕೆ ಯುವರಾಜ್ ಸಿಂಗ್ ಬೆಂಬಲ ನೀಡಿದ್ದೇಕೆ?

FIFA World Cup 2018: Yuvraj Singh supporting France because of Paul Pogba
Highlights


ಟೀಂ ಇಂಡಿಯಾ ಕ್ರಿಕೆಟಿಗ ಯುವರಾಜ್ ಸಿಂಗ್ ಪ್ರತಿ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬ್ರೆಜಿಲ್ ತಂಡಕ್ಕೆ ಬೆಂಬಲ ನೀಡುತ್ತಿದ್ದರು. ಆದಜರೆ 2018ರ ಫಿಫಾ ವಿಶ್ವಕಪ್ ಟೂರ್ನಿ ವೇಳೆಗೆ ಯುವಿ ಬ್ರೆಜಿಲ್‌ನಿಂದ ಫ್ರಾನ್ಸ್ ತಂಡಕ್ಕೆ ಬದಲಾಯಿಸಿದ್ದಾರೆ. ಅಷ್ಟಕ್ಕೂ ಯುವಿ ತನ್ನ ಬೆಂಬಲವನ್ನ ಫ್ರಾನ್ಸ್ ತಂಡಕ್ಕೆ ಬದಲಾಯಿಸಿದ್ದೇಕೆ? ಇಲ್ಲಿದೆ ವಿವರ

ಚಂಡಿಘಡ(ಜೂ.22): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇಷ್ಟು ವರ್ಷ ಬ್ರೆಜಿಲ್ ತಂಡಕ್ಕೆ ಬೆಂಬಲ ನೀಡಿದ್ದ ಟೀಂ ಇಂಡಿಯಾ ಕ್ರಿಕೆಟಿಗ ಯುವರಾಜ್ ಸಿಂಗ್ ಇದೀಗ ತಂಡವನ್ನ ಬದಲಾಯಿಸಿದ್ದಾರೆ. ರಷ್ಯಾದಲ್ಲಿ ನಡೆಯುತ್ತಿರುವ ಈ ಬಾರಿಯ ಫಿಫಾ  ವಿಶ್ವಕಪ್ ಟೂರ್ನಿಯಲ್ಲಿ ಯುವಿ ಫ್ರಾನ್ಸ್ ತಂಡವನ್ನ ಬೆಂಬಲಿಸುತ್ತಿದ್ದಾರೆ.

ಬ್ರೆಜಿಲ್ ತಂಡದಿಂದ ಫ್ರಾನ್ಸ್ ತಂಡಕ್ಕೆ ಯುವಿ ತನ್ನ ಬೆಂಬಲವನ್ನ ಬದಲಾಯಿಸಲು ಮುಖ್ಯಕಾರಣ ಸ್ಟಾರ್ ಪ್ಲೇಯರ್ ಪೌಲ್ ಪೋಗ್ಬಾ. ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಪ್ರಮುಖ ಫುಟ್ಬಾಲ್ ಪಟು ಪೌಲ್ ಪೋಗ್ಬಾ, ಫ್ರಾನ್ಸ್ ತಂಡವನ್ನ ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಪೌಲ್ ಪೋಗ್ಬಾಗಾಗಿ ಫ್ರಾನ್ಸ್ ತಂಡವನ್ನ ಸಪೋರ್ಟ್ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಕಳೆದ ನಾಲ್ಕು ಫಿಫಾ ವಿಶ್ವಕಪ್ ಟೂರ್ನಿಗಳಲ್ಲಿ ಬ್ರೆಜಿಲ್ ತಂಡಕ್ಕೆ ಬೆಂಬಲ ಸೂಚಿಸಿದ್ದೆ. ಈಗಲೂ ಬ್ರೆಜಿಲ್ ನನ್ನ ನೆಚ್ಚಿನ ತಂಡ. ಆದರೆ ಬೆಂಬಲ ಮಾತ್ರ ಫ್ರಾನ್ಸ್ ತಂಡಕ್ಕಿರಲಿದೆ ಎಂದು 2011ರ ಕ್ರಿಕೆಟ್ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಹೇಳಿದ್ದಾರೆ.

loader