ರಷ್ಯಾ(ಜು.03): ಫಿಫಾ ವಿಶ್ವಕಪ್ ಟೂರ್ನಿಯ ನಾಕೌಟ್ ಪಂದ್ಯದಲ್ಲಿ ಸ್ವಿಟ್ಜರ್‌ಲೆಂಡ್ ತಂಡವನ್ನ ಮಣಿಸಿದ ಸ್ವೀಡನ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಗ್ರೂಪ್ ಸ್ಟೇಜ್‌ನಲ್ಲಿ ಉತ್ತಮ ಹೋರಾಟ ನೀಡಿದ ಸ್ವಿಟ್ಜರ್‌ಲೆಂಡ್ ನಾಕೌಟ್ ಹಂತದಲ್ಲಿ ಸೋಲೋ ಮೂಲಕ ಟೂರ್ನಿಗೆ ವಿದಾಯ ಹೇಳಿತು.  

ಸ್ವೀಡನ್ ಹಾಗೂ ಸ್ವಿಟ್ಜರ್‌ಲೆಂಡ್ ಎರಡು ಬಲಿಷ್ಠ ತಂಡಗಳು. ಹೀಗಾಗಿ ಮೊದಲಾರ್ಧದಲ್ಲಿ ಸಮಭಲದ ಹೋರಾಟ ನೀಡಿತು. ಜಿದ್ದಾಜಿದ್ದಿನ ಹೋರಾಟದಲ್ಲಿ ಗೋಲು ದಾಖಲಾಗಲಿಲ್ಲ. ಹೀಗಾಗಿ ಹತಾಶೆಗೊಂಡ ಫುಟ್ಬಾಲ್ ಪಟುಗಳು ಎದುರಾಳಿಗಳಿಗೆ ಟಕ್ಕರ್ ನೀಡಲು ಮುಂದಾದರು. ಹೀಗಾಗಿ ಅಂಪೈರ್‌ನಿಂದ ಎಚ್ಚರಿಕೆ ಜೊತೆ ಹಳದಿ ಕಾರ್ಡ್‌ಗಳು ಹೊರಬಂತು.

ಫಸ್ಟ್ ಹಾಫ್‌ನಲ್ಲಿ ಬಿರುಸಿನ ಹೋರಾಟ ನೀಡಿದರು ಉಭಯ ತಂಡಗಳು ಗೋಲು ದಾಖಲಿಸಲಿಲ್ಲ. ಹೀಗಾಗಿ ದ್ವಿತಿಯಾರ್ಧ ಮತ್ತಷ್ಟು ರೋಚಕಗೊಂಡಿತು. 66ನೇ ನಿಮಿಷದಲ್ಲಿ ಎಮಿಲ್ ಫೋರ್ಸ್‌ಬರ್ಗ್ ಸಿಡಿಸಿದ ಗೋಲಿನಿಂದ ಸ್ವೀಡನ್ 1-0 ಮುನ್ನಡೆ ಸಾಧಿಸಿತು.

ಸಮಭಲಕ್ಕಾಗಿ ಸ್ವಿಟ್ಜರ್‌ಲೆಂಡ್ ಕೊನೆಯವರೆಗೂ ಹೋರಾಡಿತು. ಆದರೆ ಪ್ರಯೋಜನವಾಗಲಿಲ್ಲ. ಈ ಮೂಲಕ ಸ್ವೀಡನ್ 1-0 ಅಂತರದ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಸ್ವೀಡನ್ ವಿರುದ್ಧ ಸೋತ ಸ್ವಿಟ್ಜರ್‌ಲೆಂಡ್ ಟೂರ್ನಿಯಿಂದ ಹೊರಬಿತ್ತು.