ಫಿಫಾ ವಿಶ್ವಕಪ್ 2018: ಸೌತ್‌ಕೊರಿಯಾಗೆ ಸೋಲುಣಿಸಿದ ಮೆಕ್ಸಿಕೋ

FIFA World Cup 2018: Mexico beat South Korea 2-1
Highlights

ಸೌತ್‌ಕೊರಿಯಾ ವಿರುದ್ಧ ಗೆಲುವಿನ ನಗೆ ಬೀರಿದ ಮೆಕ್ಸಿಕೋ ಇದೀಗ ಜರ್ಮನಿ ಹಾಗೂ ಸ್ವೀಡನ್ ನಡುವಿನ ಫಲಿತಾಂಶವನ್ನ ಎದುರುನೋಡುತ್ತಿದೆ. ಮೆಕ್ಸಿಕೋ 16ರ ಘಟ್ಟ ಪ್ರವೇಶಿಸಲು ಜರ್ಮನಿ ತಂಡದ ಪ್ರದರ್ಶನ ಯಾಕೆ ಮುಖ್ಯ. ಇಲ್ಲಿದೆ ವಿವರ.

ರಷ್ಯಾ(ಜೂ.23): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮೆಕ್ಸಿಕೋ ರೋಚಕ ಗೆಲುವು ದಾಖಲಿಸಿದೆ. ಸೌತ್‌ಕೊರಿಯಾ ವಿರುದ್ಧ ನಡೆದ ಗ್ರೂಪ್ ಸ್ಟೇಜ್  ಪಂದ್ಯದಲ್ಲಿ ಮೆಕ್ಸಿಕೋ 2-1 ಗೋಲುಗಳ ಗೆಲುವು ಸಾಧಿಸಿದೆ. ಈ ಮೂಲಕ ಮೆಕ್ಸಿಕೋ ತಂಡದ ನಾಕೌಟ್ ಆಸೆ ಜೀವಂತವಾಗಿದೆ.

ಮೊದಲಾರ್ಧದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನ ಮೆಕ್ಸಿಕೋ ತಂಡ ಬಳಸಿಕೊಂಡಿತು. 26ನೇ ನಿಮಿಷದಲ್ಲಿ ಕಾರ್ಲೋಸ್ ವೇಲಾ ಪೆನಾಲ್ಟಿ ಮೂಲಕ ಗೋಲು ಸಿಡಿಸಿದರು. ಮೊದಲಾರ್ಧದಲ್ಲಿ ಮೆಕ್ಸಿಕೋ 1-0 ಅಂತರ ಕಾಪಾಡಿಕೊಂಡಿತು.

ದ್ವಿತಿಯಾರ್ಧದ 66ನೇ ನಿಮಿಷದಲ್ಲಿ ಮೆಕ್ಸಿಕೋದ ಜೇವಿಯರ್ ಹರ್ನಾಡೆಜ್ ಬಾರಿಸಿದ ಗೋಲಿನಿಂದ ಮೆಕ್ಸಿಕೋ 2-0 ಮುನ್ನಡೆ ಪಡೆದುಕೊಂಡಿತು. ಆದರೆ ಇಂಜುರಿ ಟೈಮ್‌ನಲ್ಲಿ ಸೌತ್‌ಕೊರಿಯಾ ಗೋಲು ಬಾರಿಸಿತು 90+3ನೇ ನಿಮಿಷದಲ್ಲಿ ಕೊರಿಯಾದ ಸನ್ ಹ್ಯುಯೆಂಗ್ ಮಿನ್ ಸಿಡಿಸಿದ ಗೋಲಿನಿಂದ ಸೌತ್‌ಕೋರಿಯಾ ಸೋಲಿನ ಅಂತರ ಕಡಿಮೆ ಮಾಡಿತು.

2-1 ಅಂತರ ಗೆಲುವು ಸಾಧಿಸಿದ ಮೆಕ್ಸಿಕೋ ನಾಕೌಟ್ ಆಸೆ ಜೀವಂತವಾಗಿದೆ. ಸ್ವೀಡನ್ ವಿರುದ್ಧ ಜರ್ಮನಿ ಸೋಲು ಅನುಭವಿಸಿದರೆ, ಮೆಕ್ಸಿರೋ 16ರ ಘಟ್ಟ ಪ್ರವೇಶಿಸಲಿದೆ.

loader