ಫಿಫಾ ಫೈನಲ್ ಪಂದ್ಯದ ಟಿಕೆಟ್ ಬೆಲೆ ಬರೋಬ್ಬರಿ 19 ಕೋಟಿ ರೂಪಾಯಿ

FIFA WORLD CUP 2018 Luxury ticket deals for 9.5 crore to 19 crore
Highlights

ಫಿಪಾ ಫುಟ್ಬಾಲ್ ಟೂರ್ನಿ ಟಿಕೆಟ್ ಬೆಲೆ ಕೇಳಿದರೆ ನೀವು ದಂಗಾಗಿ ಹೋಗುತ್ತೀರಿ. ಫೈನಲ್ ಪಂದ್ಯದ ಒಂದು ಟಿಟೆಕ್‌ನಿಂದ ಭಾರತದ ಐಪಿಎಲ್ ಟೂರ್ನಿಯ ಇಡೀ ಕ್ರೀಡಾಂಗಣದ ಟಿಕೆಟ್ ಕೊಳ್ಳಬಹುದು. ಹಾಗಾದರೆ ಈ ದುಬಾರಿ ಟಿಕೆಟ್‌ನಲ್ಲಿಎನೆಲ್ಲಾ ಸೌಲಭ್ಯಗಳಿವೆ. ಇಲ್ಲಿದೆ 

ರಶ್ಯಾ(ಜೂನ್.8): 19 ಕೋಟಿ ರೂಪಾಯಿ..ಅಚ್ಚರಿಯಾಗುತ್ತಿದೆ ಅಲ್ವಾ? ನಿಜ. ಇದು ಕೇವಲ ಒಂದು ಟಿಕೆಟ್‌ನ ಬೆಲೆ. ರಶ್ಯಾದಲ್ಲಿ ಆಯೋಜಿಸಲಾಗಿರುವ ಫಿಫಾ ವಿಶ್ವಕಪ್ 2018ರ ಫೈನಲ್ ಪಂದ್ಯದ ಐಶರಾಮಿ ಟಿಕೆಟ್ ಬೆಲೆ  9 ಕೋಟಿಯಿಂದದ 19 ಕೋಟಿ ರೂಪಾಯಿ.

ಐಪಿಎಲ್ ಟೂರ್ನಿಯಲ್ಲಾಗಿದ್ದರೆ, ಇಡೀ ಕ್ರೀಡಾಂಗಣದ ಟಿಕೆಟ್ ಕೊಳ್ಳಬಹುದು. ಆದರೆ ಇದು ಫಿಫಾ ಫುಟ್ಬಾಲ್.  ಇಷ್ಟೊಂದು ದುಬಾರಿಯಾದರೂ, ಈ ಟಿಕೆಟ್ ಕೊಳ್ಳಲು ಫುಟ್ಬಾಲ್ ಅಭಿಮಾನಿಗಳು ಹಿಂದೆ ಮುಂದೆ ನೋಡುತ್ತಿಲ್ಲ. ಫೈನಲ್ ಪಂದ್ಯದ ದುಬಾರಿ ಟಿಕೆಟ್ ಗಳಲ್ಲಿ 2 ವಿಧಗಳಿವೆ.  ಒಂದು 9 ಕೋಟಿ ರೂಪಾಯಿ, ಇನ್ನೊಂದು 19 ಕೋಟಿ ರೂಪಾಯಿ.  ಫಿಫಾ ವಿಶ್ವಕಪ್ ಆಯೋಜಕರು ಬಿಡುಗಡೆ ಮಾಡಿರುವ ಈ ದುಬಾರಿ ಟಿಕೆಟ್ ಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಹಾಗಾದರೆ ಈ ಟಿಕೆಟ್‌ನಲ್ಲಿ ಏನೆಲ್ಲಾ ಸೌಲಭ್ಯಗಳಿವೆ ಅನ್ನೋದು ಇಲ್ಲಿದೆ.

19 ಕೋಟಿ ರೂಪಾಯಿ ಟಿಕೆಟ್: ಈ ಟಿಕೆಟ್‌ನಲ್ಲಿ ನೀವು ಫೈನಲ್ ಪಂದ್ಯ, ಎರಡು ಸೆಮಿಫೈನಲ್ ಪಂದ್ಯ ಹಾಗೂ ಉದ್ಘಾಟನಾ ಪಂದ್ಯವನ್ನು ವೀಕ್ಷಿಸಬುಹುದು. ನಿಮಗೆ ಫೈನಲ್ ಪಂದ್ಯದ ಸೂಟ್ ಹಾಗೂ ವಿಐಪಿ ಸೂಟ್ ನೀಡಲಾಗುತ್ತೆ. ಅತ್ಯುತ್ತಮ ಆಸನ ವ್ಯವಸ್ಥೆ, ಉಳಿದುಕೊಳ್ಳಲು ಖಾಸಗಿ ಲಾಡ್ಜ್, ತಿಂಡಿ, ಊಟ, ಲಿಕ್ಕರ್ ಸೇರಿದಂತೆ ಎಲ್ಲವೂ ಸಿಗಲಿದೆ. ನೀವು ಉಳಿದುಕೊಳ್ಳುವ ಖಾಸಗಿ ಹೊಟೆಲ್‌ನಿಂದ ಕ್ರೀಡಾಂಗಣಕ್ಕೆ ತೆರಳಲು ಕಾರಿನ ವ್ಯವಸ್ಥೆ ಕೂಡ ಸಿಗಲಿದೆ. ಈ ಟಿಕೆಟ್ ಕೊಳ್ಳುವ ವ್ಯಕ್ತಿಗೆ ವಿಐಪಿ ಟ್ರೀಟ್‌ಮೆಂಟ್, ಭದ್ರತೆ ಸೇರಿದಂತೆ ಗರಿಷ್ಠ ಸೌಲಭ್ಯವನ್ನ ಫಿಫಾ ನೀಡಲಿದೆ.

ಕೋಟಿ ರೂಪಾಯಿ ಟಿಕೆಟ್ ಜೊತೆಗೆ ಲಕ್ಷ ರೂಪಾಯಿಗಳು ಟಿಕೆಟ್ ಲಭ್ಯವಿದೆ. ಆದರೆ ಎಲ್ಲಾ ಟಿಕೆಟ್‌ಗಳಿಗೂ ಬಾರಿ ಬೇಡಿಕೆ ಇದೆ. ಫುಟ್ಬಾಲ್ ಟೂರ್ನಿಯಲ್ಲಿ ಅಭಿಮಾನಿಗಳಿಗೆ ಟಿಕೆಟ್ ಬೆಲೆ ಮುಖ್ಯವಲ್ಲ. ಪಂದ್ಯ ವೀಕ್ಷಣೆ ಮುಖ್ಯ. ಹೀಗಾಗಿ ಅದೆಷ್ಟೇ ದುಬಾರಿಯಾದರೂ ಅಭಿಮಾನಿಗಳು ಟಿಕೆಟ್ ಕೊಳ್ಳಲು ಮುಗಿಬೀಳುತ್ತಿದ್ದಾರೆ.

loader