Asianet Suvarna News Asianet Suvarna News

ಬಾಹ್ಯಕಾಶದಲ್ಲಿ ಫಿಫಾ ವಿಶ್ವಕಪ್ ಚಿಹ್ನೆ ಬಿಡುಗಡೆ ಮಾಡಿದ್ದೇಕೆ?

ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಬಳಲಸಾಗಿರುವ ಚಿಹ್ನೆಯ ವಿಶೇಷತೆ ಏನು? ಈ ಚಿಹ್ನೆಯನ್ನ ಅಂತಾರಾಷ್ಟ್ರೀಯ ಬಾಹ್ಯಕಾಶದಲ್ಲಿ ಬಿಡುಗಡೆ ಮಾಡಿದ್ದೇಕೆ? ಇಂತಹ ಹಲವಾರು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
 

Fifa world cup 2018 logo released in space

ರಷ್ಯಾ(ಜೂನ್.13): ಪ್ರತಿ ಫಿಫಾ ವಿಶ್ವಕಪ್ ಟೂರ್ನಿಗೆ ಆತಿಥ್ಯವಹಿಸೋ ರಾಷ್ಟ್ರಗಳ ಸಂಸ್ಕೃತಿ, ಸಂಪ್ರದಾಯವನ್ನ ಗಮನದಲ್ಲಿಟ್ಟು ವಿಶ್ವಕಪ್ ಚಿಹ್ನೆ ತಯಾರಿಸಲಾಗುತ್ತೆ. ಈ ಬಾರಿ ಕೂಡ ರಷ್ಯಾದ ಶ್ರೀಮಂತ ಕಲೆ, ಸಂಪ್ರದಾಯ ಹಾಗೂ ರಷ್ಯಾ ದೇಶದ ಸಾಧನೆ ಮತ್ತು ಅದರ ಇತಿಹಾಸವನ್ನ ಬಿಂಬಿಸುವಂತ ಫಿಫಾ ವಿಶ್ವಕಪ್ ಫುಟ್ಬಾಲ್ ಚಿಹ್ನೆಯನ್ನ ರಚಿಸಲಾಗಿದೆ.

ರಷ್ಯಾ ರಾಷ್ಟ್ರಧ್ವಜದಲ್ಲಿರುವ ಕೆಂಪು ಹಾಗೂ ನೀಲಿ ಬಣ್ಣದ ಜತೆಗೆ ಕಪ್ಪು ಮತ್ತು ಚಿನ್ನದ ಬಣ್ಣಗಳನ್ನು ಬಳಸಿ ಚಿಹ್ನೆ ವಿನ್ಯಾಸಗೊಳಿಸಲಾಗಿದೆ.  ಚಿಹ್ನೆಯ ಮೇಲ್ಭಾಗದಲ್ಲಿ ಚೆಂಡನ್ನು ಇರಿಸಲಾಗಿದ್ದು, ಇದು ಜಗತ್ತಿನಲ್ಲಿರುವ ಫುಟ್ಬಾಲ್ ಮೇಲಿನ ಪ್ರೀತಿಯನ್ನು ಬಿಂಬಿಸುತ್ತದೆ. 

ಪ್ರಪಂಚದಲ್ಲಿರುವ ಕೋಟ್ಯಂತರ ಅಭಿಮಾನಿಗಳ ಏಕತೆಯನ್ನು ಈ ಬಾರಿಯ ಚಿಹ್ನೆ ಸಾರಿ ಹೇಳುತ್ತದೆ. ಪೋರ್ಚುಗಲ್ ಮೂಲದ ಬ್ರ್ಯಾಂಡಿಯ ಸೆಂಟ್ರಲ್ ಎಂಬ ಸಂಸ್ಥೆ ಚಿಹ್ನೆ ವಿನ್ಯಾಸಗೊಳಿಸಿದೆ. ಇದರ ಜತೆಗೆ ರಷ್ಯಾ ಹಾಗೂ ಅಂತಾರಾಷ್ಟ್ರೀಯ ಮಟ್ಟದ 8 ಸಂಸ್ಥೆಗಳು ಈ ಸೃಜನಶೀಲ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದವು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಈ ಬಾರಿಯ ಚಿಹ್ನೆಯನ್ನು ಅನಾವರಣಗೊಳಿಸಿದ್ದು, ಮತ್ತೊಂದು ವಿಶೇಷ. 

Follow Us:
Download App:
  • android
  • ios