ಫಿಫಾ ವಿಶ್ವಕಪ್: ನಾಕೌಟ್’ಗೆ ಲಗ್ಗೆಯಿಟ್ಟ ಫ್ರಾನ್ಸ್

FIFA World Cup 2018: France beat Peru 1-0 to enter pre quarters
Highlights

‘ಸಿ’ ಗುಂಪಿನ ಪಂದ್ಯದಲ್ಲಿ ಕೆಲ್ಯಾನ್ ಮಾಪ್ಪೆ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಫ್ರಾನ್ಸ್ ಭರ್ಜರಿ ಜಯ ದಾಖಲಿಸಿದೆ. ಪಂದ್ಯದ 34ನೇ ನಿಮಿಷದಲ್ಲಿ ಆ್ಯಂಟೋನಿ ಗ್ರೀಜ್’ಮನ್ ನೀಡಿದ ಪಾಸ್’ನ್ನು ಯಶಸ್ವಿಯಾಗಿ ಬಳಸಿಕೊಂಡ ಮಾಪ್ಪೆ ಭರ್ಜರಿ ಗೋಲು ಸಿಡಿಸಿದರು. ಮೊದಲಾರ್ಧ ಮುಕ್ತಾಯಕ್ಕೆ ಫ್ರಾನ್ಸ್ 1-0 ಗೋಲುಗಳ ಮುನ್ನಡೆ ಕಾಯ್ದುಕೊಂಡಿತ್ತು.

ರಷ್ಯಾ[ಜೂ.21]: ಬಲಿಷ್ಠ ಫ್ರಾನ್ಸ್ ತಂಡ ಪೆರು ತಂಡವನ್ನು 1-0 ಗೋಲುಗಳಿಂದ ಮಣಿಸಿ ಪ್ರೀಕ್ವಾರ್ಟರ್ ಹಂತ ಪ್ರವೇಶಿಸಿದೆ.

‘ಸಿ’ ಗುಂಪಿನ ಪಂದ್ಯದಲ್ಲಿ ಕೆಲ್ಯಾನ್ ಮಾಪ್ಪೆ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಫ್ರಾನ್ಸ್ ಭರ್ಜರಿ ಜಯ ದಾಖಲಿಸಿದೆ. ಪಂದ್ಯದ 34ನೇ ನಿಮಿಷದಲ್ಲಿ ಆ್ಯಂಟೋನಿ ಗ್ರೀಜ್’ಮನ್ ನೀಡಿದ ಪಾಸ್’ನ್ನು ಯಶಸ್ವಿಯಾಗಿ ಬಳಸಿಕೊಂಡ ಮಾಪ್ಪೆ ಭರ್ಜರಿ ಗೋಲು ಸಿಡಿಸಿದರು. ಮೊದಲಾರ್ಧ ಮುಕ್ತಾಯಕ್ಕೆ ಫ್ರಾನ್ಸ್ 1-0 ಗೋಲುಗಳ ಮುನ್ನಡೆ ಕಾಯ್ದುಕೊಂಡಿತ್ತು.

ದ್ವಿತಿಯಾರ್ಧದಲ್ಲೂ ಫ್ರಾನ್ಸ್ ಚೆಂಡಿನ ಮೇಲೆ ಹಿಡಿತ ಸಾಧಿಸಿತು. ಪೆರು ತಂಡಕ್ಕೆ ಗೋಲು ಬಾರಿಸಲು ಅವಕಾಶ ನೀಡಲಿಲ್ಲ. ಕೊನೆಯವರೆಗೂ ಪೆರು ಗೋಲು ಬಾರಿಸಲು ಯತ್ನಿಸಿತಾದರೂ ಯಶಸ್ವಿಯಾಗಲಿಲ್ಲ. ಹೀಗಾಗಿ ಪೆರುವಿನ ನಾಕೌಟ್ ಪ್ರವೇಶದ ಕನಸು ಭಗ್ನವಾಯಿತು.

ಆಡಿದ 2 ಪಂದ್ಯಗಳಲ್ಲಿ 2 ಗೆದ್ದು ಅಂಕಪಟ್ಟಿಯಲ್ಲಿ ಫ್ರಾನ್ಸ್ ಮೊದಲ ಸ್ಥಾನದಲ್ಲಿ, ಡೆನ್ಮಾರ್ಕ್ ಒಂದು ಗೆಲುವು ಒಂದು ಡ್ರಾನೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಪೆರು ಎರಡೂ ಪಂದ್ಯಗಳನ್ನು ಸೋತು ಟೂರ್ನಿಯಿಂದ ಹೊರಬಿದ್ದಿದೆ. 

loader