ಫಿಫಾ ಮೆಲುಕು: 2010ರಲ್ಲಿ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟ ಸ್ಪೇನ್
ಈಜಿಪ್ಟ್, ಮೊರಾಕ್ಕೊ ಹಿಂದಿಕ್ಕಿ ದ.ಆಫ್ರಿಕಾ ಆತಿಥ್ಯ ಹಕ್ಕು ಪಡೆದುಕೊಂಡಿತ್ತು. ಇದರೊಂದಿಗೆ ವಿಶ್ವಕಪ್‌ಗೆ ಆತಿಥ್ಯ ವಹಿಸಿದ ಆಫ್ರಿಕಾದ ಮೊದಲ ರಾಷ್ಟ್ರ ಎನ್ನುವ ಕೀರ್ತಿಗೆ ಪಾತ್ರವಾಯಿತು. 32 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು.
ಬೆಂಗಳೂರು[ಜೂ.12]: 19ನೇ ಆವೃತ್ತಿಯ ಫಿಫಾ ಫುಟ್ಬಾಲ್ ವಿಶ್ವಕಪ್ ದಕ್ಷಿಣ ಆಫ್ರಿಕಾದಲ್ಲಿ 2010ರಲ್ಲಿ ನಡೆಯಿತು. ಟೂರ್ನಿ ಆತಿಥ್ಯದ ಬಿಡ್ಡಿಂಗ್ ಕೇವಲ ಆಫ್ರಿಕಾ ರಾಷ್ಟ್ರಗಳ ನಡುವೆ ಮಾತ್ರ ನಡೆದಿದ್ದು ವಿಶೇಷ.
ಈಜಿಪ್ಟ್, ಮೊರಾಕ್ಕೊ ಹಿಂದಿಕ್ಕಿ ದ.ಆಫ್ರಿಕಾ ಆತಿಥ್ಯ ಹಕ್ಕು ಪಡೆದುಕೊಂಡಿತ್ತು. ಇದರೊಂದಿಗೆ ವಿಶ್ವಕಪ್‌ಗೆ ಆತಿಥ್ಯ ವಹಿಸಿದ ಆಫ್ರಿಕಾದ ಮೊದಲ ರಾಷ್ಟ್ರ ಎನ್ನುವ ಕೀರ್ತಿಗೆ ಪಾತ್ರವಾಯಿತು. 32 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದವು.
ಫೈನಲ್‌ನಲ್ಲಿ ನೆದರ್‌ಲೆಂಡ್ಸ್ ವಿರುದ್ಧ ಹೆಚ್ಚುವರಿ ಸಮಯದಲ್ಲಿ ಆ್ಯಂಡ್ರೆಯೆಸ್ ಇನಿಯೆಸ್ಟಾ (116ನೇ ನಿ.) ಬಾರಿಸಿದ ಗೋಲಿನ ನೆರವಿನಿಂದ ಸ್ಪೇನ್ ಗೆಲುವು ಸಾಧಿಸಿ, ಚೊಚ್ಚಲ ಬಾರಿಗೆ ಪ್ರಶಸ್ತಿ ಎತ್ತಿಹಿಡಿಯಿತು.
ವಿಶ್ವಕಪ್ ಗೆದ್ದ 8ನೇ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ಸ್ಪೇನ್, ಯುರೋಪ್‌ನ ಆಚೆ ನಡೆದ ವಿಶ್ವಕಪ್‌ನಲ್ಲಿ ಟ್ರೋಫಿ ಗೆದ್ದ ಮೊದಲ ಯುರೋಪಿಯನ್ ರಾಷ್ಟ್ರ ಎನ್ನುವ ದಾಖಲೆಗೂ ಪಾತ್ರವಾಯಿತು. ಆತಿಥೇಯ ದ.ಆಫ್ರಿಕಾ, 2006ರ ಚಾಂಪಿಯನ್ ಇಟಲಿ, 2006ರ ರನ್ನರ್-ಅಪ್ ಫ್ರಾನ್ಸ್ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಿದ್ದು ವಿಶೇಷ.
* ವರ್ಷ: 2010
* ಚಾಂಪಿಯನ್: ಸ್ಪೇನ್
* ರನ್ನರ್-ಅಪ್: ನೆದರ್‌ಲೆಂಡ್ಸ್