Asianet Suvarna News Asianet Suvarna News

ಫಿಫಾ ಮೆಲುಕು: 1994ರಲ್ಲಿ 4ನೇ ಬಾರಿ ಕಪ್ ಗೆದ್ದ ಬ್ರೆಜಿಲ್

ಪ್ರತಿ ಪಂದ್ಯಕ್ಕೆ ಸರಾಸರಿ 69೦೦೦ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಆಗಮಿಸಿದ್ದು ಸಹ ಒಂದು ದಾಖಲೆ. ಈ ದಾಖಲೆ ಇವತ್ತಿಗೂ ಉಳಿದುಕೊಂಡಿದೆ. 

FIFA World Cup 2018: Flashback of 1994 FIFA World Cup

ಬೆಂಗಳೂರು[ಜೂ.10]: 15ನೇ ಆವೃತ್ತಿಯ ಫಿಫಾ ಫುಟ್ಬಾಲ್ ವಿಶ್ವಕಪ್ 1994ರಲ್ಲಿ ಅಮೆರಿಕದಲ್ಲಿ ನಡೆಯಿತು. 9 ನಗರಗಳ 9 ಕ್ರೀಡಾಂಗಣಗಳು ಪಂದ್ಯಾವಳಿಗೆ ಆತಿಥ್ಯ ವಹಿಸಿದ್ದವು. ದೇಶದಲ್ಲಿ ಜನಪ್ರಿಯ ಫುಟ್ಬಾಲ್ ಲೀಗ್ ಇಲ್ಲದಿದ್ದರೂ, ಈ ಆವೃತ್ತಿ ಆರ್ಥಿಕವಾಗಿ ಫುಟ್ಬಾಲ್ ವಿಶ್ವಕಪ್ ಇತಿಹಾಸದ ಅತ್ಯಂತ ಯಶಸ್ವಿ ಟೂರ್ನಿ ಎನಿಸಿಕೊಂಡಿತು. 

ಪ್ರತಿ ಪಂದ್ಯಕ್ಕೆ ಸರಾಸರಿ 69೦೦೦ ಪ್ರೇಕ್ಷಕರು ಕ್ರೀಡಾಂಗಣಕ್ಕೆ ಆಗಮಿಸಿದ್ದು ಸಹ ಒಂದು ದಾಖಲೆ. ಈ ದಾಖಲೆ ಇವತ್ತಿಗೂ ಉಳಿದುಕೊಂಡಿದೆ. ಫೈನಲ್‌ನಲ್ಲಿ ಇಟಲಿ ಎದುರು ಪೆನಾಲ್ಟಿ ಶೂಟೌಟ್‌ನಲ್ಲಿ 3-2 ಗೋಲುಗಳ ಗೆಲುವು ಸಾಧಿಸಿದ ಬ್ರೆಜಿಲ್ ಚಾಂಪಿಯನ್ ಪಟ್ಟ ಅಲಂಕರಿಸಿತು. ವಿಶ್ವಕಪ್ ಫೈನಲ್ ಪಂದ್ಯ ಪೆನಾಲ್ಟಿ ಶೂಟೌಟ್‌ನೊಂದಿಗೆ ನಿರ್ಧಾರವಾಗಿದ್ದು ಇದೇ ಮೊದಲು. ನಾಲ್ಕನೇ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದ ಮೊದಲ ತಂಡ ಎನ್ನುವ ದಾಖಲೆಯನ್ನು ಬ್ರೆಜಿಲ್ ರಚಿಸಿತು. 

ಗ್ರೀಸ್, ನೈಜಿರೀಯಾ ಹಾಗೂ ಸೌದಿ ಅರೇಬಿಯಾ ಮೊದಲ ಬಾರಿಗೆ ವಿಶ್ವಕಪ್ ಪ್ರಧಾನ ಹಂತದಲ್ಲಿ ಪಾಲ್ಗೊಂಡವು. ಸೋವಿಯತ್ ರಾಷ್ಟ್ರಗಳ ಒಕ್ಕೂಟದಿಂದ ಹೊರಬಂದ ಬಳಿಕ ರಷ್ಯಾ ಸಹ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಿತು.
* ವರ್ಷ: 1994
* ಚಾಂಪಿಯನ್: ಬ್ರೆಜಿಲ್
* ರನ್ನರ್-ಅಪ್: ಇಟಲಿ

Follow Us:
Download App:
  • android
  • ios