Asianet Suvarna News Asianet Suvarna News

ಫಿಫಾ ಮೆಲುಕು: ’ಮೆಕ್ಸಿಕನ್ ವೇವ್’ ಮೊದಲು ಪರಿಚಿತಗೊಂಡಿದ್ದು ಯಾವ ವಿಶ್ವಕಪ್’ನಲ್ಲಿ ಗೊತ್ತಾ?

1986ರ ಫಿಫಾ ವಿಶ್ವಕಪ್ ಹಲವು ವಿಚಾರಗಳಿಗೆ ಫುಟ್ಬಾಲ್ ಅಭಿಮಾನಿಗಳ ಮನದಲ್ಲಿ ಸದಾ ಉಳಿಯಲಿದೆ. ಮೆಕ್ಸಿಕೊ 1970ರ ಬಳಿಕ 2ನೇ ಬಾರಿಗೆ ಆತಿಥ್ಯ ವಹಿಸಿತು. ಫೈನಲ್‌ನಲ್ಲಿ ಪಶ್ಚಿಮ ಜರ್ಮನಿ ವಿರುದ್ಧ 3-2 ಗೋಲುಗಳಿಂದ ಗೆಲುವು ಸಾಧಿಸಿದ ಅರ್ಜೆಂಟೀನಾ, 2ನೇ ಪ್ರಶಸ್ತಿ ಜಯಿಸಿತು.

fifa world cup 2018: flashback of 1986 fifa world cup

1986ರ ಫಿಫಾ ವಿಶ್ವಕಪ್ ಹಲವು ವಿಚಾರಗಳಿಗೆ ಫುಟ್ಬಾಲ್ ಅಭಿಮಾನಿಗಳ ಮನದಲ್ಲಿ ಸದಾ ಉಳಿಯಲಿದೆ. ಮೆಕ್ಸಿಕೊ 1970ರ ಬಳಿಕ 2ನೇ ಬಾರಿಗೆ ಆತಿಥ್ಯ ವಹಿಸಿತು. ಫೈನಲ್‌ನಲ್ಲಿ ಪಶ್ಚಿಮ ಜರ್ಮನಿ ವಿರುದ್ಧ 3-2 ಗೋಲುಗಳಿಂದ ಗೆಲುವು ಸಾಧಿಸಿದ ಅರ್ಜೆಂಟೀನಾ, 2ನೇ ಪ್ರಶಸ್ತಿ ಜಯಿಸಿತು.

1974ರಲ್ಲಿ ತಂಡ ಮೊದಲ ಬಾರಿಗೆ ಚಾಂಪಿಯನ್ ಆಗಿತ್ತು. ಈ ವಿಶ್ವಕಪ್’ನಲ್ಲಿ ಅರ್ಜೆಂಟೀನಾ ತಂಡವನ್ನು ಡಿಗೂ ಮರಡೋನಾ ಮುನ್ನಡೆಸಿದ್ದರು. ಮರಡೋನಾರ ‘ಹ್ಯಾಂಡ್ ಆಫ್ ಗಾಡ್’ ಹಾಗೂ ಶತಮಾನದ ಗೋಲು ದಾಖಲಾಗಿದ್ದು ಇದೇ ವಿಶ್ವಕಪ್‌ನಲ್ಲಿ. ಈ ಆವೃತ್ತಿಯಲ್ಲೂ 24 ತಂಡಗಳು ಆಡಿದ್ದವು. ಕೆನಡಾ, ಡೆನ್ಮಾರ್ಕ್,ಇರಾಕ್ ಚೊಚ್ಚಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಿದವು. ಪಂದ್ಯಾವಳಿ ವೀಕ್ಷಿಸಲು ಕ್ರೀಡಾಂಗಣಗಳಿಗೆ ಒಟ್ಟು 23.9 ಲಕ್ಷ ಪ್ರೇಕ್ಷಕರು ಆಗಮಿಸಿದ್ದರು.

ಒಟ್ಟು 5 ಗೋಲು ದಾಖಲಿಸಿದ ಮರಡೋನಾ, ಇನ್ನೂ 5 ಗೋಲುಗಳಿಗೆ ನೆರವು ನೀಡಿ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಪಾತ್ರರಾದರು. ಕ್ರೀಡಾಂಗಣಗಳಲ್ಲಿ ಅಭಿಮಾನಿಗಳು ಸಂಭ್ರಮಿಸುವ ‘ಮೆಕ್ಸಿಕನ್ ವೇವ್’ ಮೊದಲ ಬಾರಿಗೆ ಪರಿಚಿತಗೊಂಡಿದ್ದು ಇದೇ ವಿಶ್ವಕಪ್‌ನಲ್ಲಿ. 1986ರಲ್ಲಿ ಅರ್ಜೆಂಟೀನಾಗೆ 2ನೇ ವಿಶ್ವಕಪ್ ಪ್ರಶಸ್ತಿ
* ವರ್ಷ: 1986
* ಚಾಂಪಿಯನ್: ಅರ್ಜೆಂಟೀನಾ
* ರನ್ನರ್-ಅಪ್: ಪಶ್ಚಿಮ ಜರ್ಮನಿ

Follow Us:
Download App:
  • android
  • ios