ಫಿಫಾ ಮೆಲುಕು: 1982ರಲ್ಲಿ ಪ್ರಶಸ್ತಿ ಗೆದ್ದು ಬ್ರೆಜಿಲ್ ದಾಖಲೆ ಸರಿಗಟ್ಟಿದ್ದ ಇಟಲಿ
1938ರ ಬಳಿಕ ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ಇಟಲಿ, ಅತಿಹೆಚ್ಚು ಬಾರಿ ಕಪ್ ಗೆದ್ದ ಬ್ರೆಜಿಲ್ (03) ದಾಖಲೆಯನ್ನು ಸರಿಗಟ್ಟಿತು. ಅಲ್ಜೀರಿಯಾ, ಕೆಮರೂನ್, ಹೊಂಡುರಾಸ್, ಕುವೈತ್ ಹಾಗೂ ನ್ಯೂಜಿಲೆಂಡ್ ಚೊಚ್ಚಲ ಬಾರಿಗೆ ವಿಶ್ವಕಪ್‌ಗೆ ಕಾಲಿಟ್ಟವು. ಒಟ್ಟು 24 ತಂಡಗಳು ಪಾಲ್ಗೊಂಡಿದ್ದವು.
ಬೆಂಗಳೂರು[ಜೂ.08]: 2ನೇ ಫಿಫಾ ಫುಟ್ಬಾಲ್ ವಿಶ್ವಕಪ್ 1982ರಲ್ಲಿ ಸ್ಪೇನ್‌ನಲ್ಲಿ ನಡೆಯಿತು. ಈ ಬಾರಿ ಪ್ರಶಸ್ತಿ ಇಟಲಿ ಪಾಲಾಯಿತು. ಫೈನಲ್‌ನಲ್ಲಿ ಪಶ್ಚಿಮ ಜರ್ಮನಿ ವಿರುದ್ಧ 3-1 ಗೋಲುಗಳಲ್ಲಿ ಗೆಲುವು ಸಾಧಿಸಿದ ಇಟಲಿ, 3ನೇ ಬಾರಿಗೆ ವಿಶ್ವ ಚಾಂಪಿಯನ್ ಆಯಿತು. 1938ರ ಬಳಿಕ ಮೊದಲ ಬಾರಿಗೆ ಪ್ರಶಸ್ತಿ ಗೆದ್ದ ಇಟಲಿ, ಅತಿಹೆಚ್ಚು ಬಾರಿ ಕಪ್ ಗೆದ್ದ ಬ್ರೆಜಿಲ್ (03) ದಾಖಲೆಯನ್ನು ಸರಿಗಟ್ಟಿತು.
ಅಲ್ಜೀರಿಯಾ, ಕೆಮರೂನ್, ಹೊಂಡುರಾಸ್, ಕುವೈತ್ ಹಾಗೂ ನ್ಯೂಜಿಲೆಂಡ್ ಚೊಚ್ಚಲ ಬಾರಿಗೆ ವಿಶ್ವಕಪ್‌ಗೆ ಕಾಲಿಟ್ಟವು. ಒಟ್ಟು 24 ತಂಡಗಳು ಪಾಲ್ಗೊಂಡಿದ್ದವು. ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಪೆನಾಲ್ಟಿ ಶೂಟೌಟ್ ಪರಿಚಯಿಸಿದ್ದು ವಿಶೇಷ.
ಇದೇ ವೇಳೆ ಮೊದಲ ಸುತ್ತಿನ ಪಂದ್ಯವೊಂದರಲ್ಲಿ ಎಲ್ ಸಾಲ್ವಡೊರ್ ವಿರುದ್ಧ 10-1 ಗೋಲುಗಳಿಂದ ಗೆದ್ದ ಹಂಗೇರಿ, ಗರಿಷ್ಠ ಅಂತರದ ಗೆಲುವಿನ ದಾಖಲೆ ಬರೆಯಿತು. ಇಟಲಿ ಮೊದಲ ಸುತ್ತಿನಲ್ಲಿ ಒಂದೂ ಪಂದ್ಯವನ್ನೂ ಗೆಲ್ಲದೆ (3 ಡ್ರಾ) 2ನೇಸುತ್ತಿಗೇರಿ, ಬಳಿಕ ಚಾಂಪಿಯನ್ ಆಯಿತು. 14 ನಗರಗಳ ಒಟ್ಟು 17 ಕ್ರೀಡಾಂಗಣಗಳು ಟೂರ್ನಿಗೆ ಆತಿಥ್ಯ ವಹಿಸಿದ್ದವು.
* ವರ್ಷ: 1982
* ಚಾಂಪಿಯನ್: ಇಟಲಿ
* ರನ್ನರ್ ಅಪ್: ಪಶ್ಚಿಮ ಜರ್ಮನಿ