ಮಾಸ್ಕೋ(ಜು.02): ಫಿಫಾ ವಿಶ್ವಕಪ್ ನಾಕೌಟ್ ಪಂದ್ಯದಲ್ಲಿ ಡೆನ್ಮಾರ್ಕ್ ತಂಡವನ್ನ ಪೆನಾಲ್ಟಿ ಶೂಟೌಟ್ ಮೂಲಕ ಮಣಿಸಿದ ಕ್ರೊವೇಷಿಯಾ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಮೂಲಕ 1998ರ ಬಳಿಕ ಇದೇ ಮೊದಲ ಬಾರಿಗೆ ಕ್ರೊವೇಷಿಯಾ ಕ್ವಾರ್ಟರ್ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದೆ.

ರೋಚಕ ಹೋರಾಟ 1-1 ಗೋಲುಗಳ ಅಂತರದಲ್ಲಿ ಸಮಭಗೊಂಡಿತು. ಹೀಗಾಗಿ ಪೆನಾಲ್ಟಿ ಶೂಟೌಟ್ ಮೂಲಕ ಫಲಿತಾಂಶ ನಿರ್ಧಾರಿಸಲಾಯಿತು. ಕ್ರೊವೇಷಿಯಾ ಗೋಲು ಕೀಪರ್ ದನಿಜೆಲ್ ಸುಬಾಸಿಕ್ ಮಾಡಿದ ಅದ್ಬುತ ಸೇವ್ ತಂಡದ ಗೆಲುವಿಗೆ ಕಾರಣವಾಯಿತು.

ದನಿಜೆಲ್ ಸುಬಾಸಿಕ್ 3 ಪೆನಾಲ್ಟಿ ಶೂಟೌಟ್ ತಡೆಯೋ ಮೂಲಕ ಕ್ರೊವೇಷಿಯಾ ತಂಡಕ್ಕೆ 3-2 ಅಂತರದ ಗೆಲುವು ತಂದುಕೊಟ್ಟರು. ಈ ಮೂಲಕ ಡೆನ್ಮಾರ್ಕ್ ವಿರೋಚಿತ ಸೋಲು ಅನುಭವಿಸಿದರೆ, ಕ್ರೊವೇಷಿಯಾ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ.