ಫಿಫಾ 2018: ನೇಯ್ಮಾರ್ ಅಬ್ಬರದಿಂದ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಬ್ರೆಜಿಲ್

FIFA World Cup 2018: Brazil beat Mexico 2-0 to enter quarters
Highlights

ಫಿಫಾ ವಿಶ್ವಕಪ್ ಟೂರ್ನಿ ಆರಂಭಿಕ ನಾಕೌಟ್ ಪಂದ್ಯಗಳಲ್ಲಿ ಬಲಿಷ್ಠ ತಂಡಗಳೆಲ್ಲಾ ಟೂರ್ನಿಯಿಂದಲೇ ಹೊರಬಿದ್ದಿತ್ತು. ಹೀಗಾಗಿ ಬ್ರೆಜಿಲ್ ತಂಡದ ಮೇಲೂ ಸಾಕಷ್ಟು ಒತ್ತಡ ನಿರ್ಮಾಣವಾಗಿತ್ತು. ಆದರೆ ನೇಯ್ಮಾರ್ ಅದ್ಬುತ ಪ್ರದರ್ಶನದಿಂದ ಬ್ರೆಜಿಲ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
 

ರಷ್ಯಾ(ಜು.02): ಫಿಫಾ ವಿಶ್ವಕಪ್ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನೇಯ್ಮಾರ್ ಅದ್ಬುತ ಪ್ರದರ್ಶನದಿಂದ ಬ್ರೆಜಿಲ್ ಗೆಲುವು ಸಾಧಿಸಿದೆ. ಮೆಕ್ಸಿಕೋ ವಿರುದ್ಧ 2-0 ಅಂತರದ ಗೆಲುವು ಸಾಧಿಸಿದ ಬ್ರೆಜಿಲ್ ಇದೀಗ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಪಂದ್ಯ ಆರಂಭಗೊಂಡಾಗಲೇ ಬ್ರೆಜಿಲ್ ಸ್ಟಾರ್ ನೇಯ್ಮಾರ್ ಆಕ್ರಮಣ ಶರು ಮಾಡಿದರು. 3 ಗೋಲು ಸ್ಕೋರಿಂಗ್ ಅವಕಾಶಗಳನ್ನ ಸೃಷ್ಟಿಸಿದ ನೇಯ್ಮಾರ್‌ಗೆ ತಂಡದ ಇತರ ಆಟಗಾರರ ಸಾಥ್ ಸಿಗಲಿಲ್ಲ. ಜಿದ್ದಾಜಿದ್ದಿನ ಹೋರಾಟ ಮೊದಲಾರ್ಧದಲ್ಲೇ 2 ಹಳದಿ ಕಾರ್ಡ್‌ಗಳು ಹೊರಬಂತು.

 ಮೊದಲಾರ್ಧದಲ್ಲಿ ಮೆಕ್ಸಿಕೋ ಒಂದೇ ಒಂದು ಆನ್ ಟಾರ್ಗೆಟ್ ಶಾಟ್ ಹೊಡೆಯಲಿಲ್ಲ. ಆದರೆ ಬ್ರೆಜಿಲ್ ಗೋಲು ಬಾರಿಸೋ ಸೂಚನೆ ನೀಡಿತು. ಹೋರಾಟ ರೋಚಕವಾಗಿದ್ದರೂ, ಫಸ್ಟ್ ಹಾಫ್‌ನಲ್ಲಿ ಗೋಲು ದಾಖಲಾಗಲಿಲ್ಲ.

ದ್ವಿತಿಯಾರ್ಧದಲ್ಲಿ ಬ್ರೆಜಿಲ್ ಆಕ್ರಮಣ ಮುಂದುವರಿಸಿತು. 51 ನೇ ನಿಮಿಷದಲ್ಲಿ ನೇಯ್ಮಾರ್ ಅದ್ಬುತ ಗೋಲು ಬಾರಿಸೋ ಮೂಲಕ ಬ್ರೆಜಿಲ್‌ಗೆ 1-0 ಮುನ್ನಡೆ ತಂದುಕೊಟ್ಟರು. ಇದರೊಂದಿಗೆ ಬ್ರೆಜಿಲ್ ಪಂದ್ಯದ ಮೇಲೆ ಹಿಡಿತ ಸಾಧಿಸಿತು.

88ನೇ ನಿಮಿಷದಲ್ಲಿ ಚೆಂಡನೊಂದಿಗೆ ಮಿಂಚಿನ ಓಟ ನಡೆಸಿದ ನೇಯ್ಮಾರ್ ಅದ್ಬುತ ಅಸಿಸ್ಟ್ ನೀಡಿದರು. ನೇಯ್ಮಾರ್ ಅಸಿಸ್ಟ್ ಪಡೆದ ರಾಬರ್ಟ್ ಫರ್ಮಿನೋ ಗೋಲಾಗಿ ಪರಿವರ್ತಿಸಿದರು. ಈ ಮೂಲಕ ಬ್ರೆಜಿಲ್ 2-0 ಅಂತರದ ಮುನ್ನಡೆ ಪಡೆದುಕೊಂಡಿತು. 

ಮೆಕ್ಸಿಕೋ ಗೋಲು ಬಾರಿಸಲು ತೀವ್ರ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಬ್ರೆಜಿಲ್ ಪಂದ್ಯವನ್ನ 2-0 ಅಂತರದಲ್ಲಿ ಗೆದ್ದುಕೊಂಡಿತು. ಈ ಮೂಲಕ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿತು. ಸೋಲಿನೊಂದಿಗೆ ಮೆಕ್ಸಿಕೋ ಫಿಫಾ ಹೋರಾಟವನ್ನ ಅಂತ್ಯಗೊಳಿಸಿತು.

loader