ಮುಂಬೈ(ಜು.11): ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಜೊತೆಗೆ ಇತರ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುತ್ತಾರೆ. ಅದರಲ್ಲೂ ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯನ್ನ ಫಾಲೋ ಮಾಡುತ್ತಿರುವ ಸಚಿನ್ ಇದೀಗ 2ನೇ ಸೆಮಿಫೈನಲ್ ಮುಖಾಮುಖಿಯಲ್ಲಿ ತಮ್ಮ ನೆಚ್ಚಿನ ತಂಡವನ್ನ ಬೆಂಬಲಿಸಿದ್ದಾರೆ.

ಫಿಫಾ ವಿಶ್ವಕಪ್ ಟೂರ್ನಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಹಾಗು ಕ್ರೊವೇಷಿಯಾ ಹೋರಾಟ ನಡೆಸಲಿದೆ. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಇಂಗ್ಲೆಂಡ್ ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

 

 

ಸಚಿನ್ ಇಂಗ್ಲೆಂಡ್ ತಂಡಕ್ಕೆ ಬೆಂಬಲ ಸೂಚಿಸಿರೋ ವೀಡಿಯೋ ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಚಿನ್ ಫುಟ್ಬಾಲ್ ಸ್ಕಿಲ್ಸ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಫುಟ್ಬಾಲ್‍‌ಗೆ ಕಿಕ್ ಮಾಡೋ ಮೂಲಕ ಕಮಾನ್ ಇಂಗ್ಲೆಂಡ್ ಎಂದಿರುವ ಸಚಿನ್ ತಮ್ಮ ಬೆಂಬಲ ಇಂಗ್ಲೆಂಡ್ ತಂಡಕ್ಕೆ ಎಂದಿದ್ದಾರೆ.