ಸೆಪ್ ಬ್ಲಾಟರ್‌'ನಿಂದ ತೆರವಾದ ಸ್ಥಾನಕ್ಕೆ ಕಳೆದ ಫೆಬ್ರವರಿಯಲ್ಲಿ ಇನ್‌'ಫ್ಯಾಂಟಿನೊ ಆಯ್ಕೆಯಾಗಿದ್ದರು.
ಲಂಡನ್(ಜ.11): ಮುಂದಿನ 2026ರ ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ 32 ರಿಂದ 48 ತಂಡಗಳು ಭಾಗವಹಿಸಲಿವೆ ಎಂದು ಫಿಫಾ ಆಡಳಿತ ಮಂಡಳಿ ಹೇಳಿದೆ.
ಅಧ್ಯಕ್ಷ ಗಿನ್ನಿ ಇನ್ಫಾಂಟಿನೊ ಅವರ ಈ ಯೋಜನೆಗೆ ಫಿಫಾ ಆಡಳಿತ ಮಂಡಳಿ ಕೂಡ ಸರ್ವಾನುಮತದಿಂದ ಒಪ್ಪಿಕೊಂಡಿದೆ. ಜ್ಯೂರಿಚ್'ನಲ್ಲಿ ನಡೆದ 37 ಮಂದಿ ಫಿಫಾ ಅಧಿಕಾರಿಗಳ ಸಭೆಯಲ್ಲಿ ನೂತನ ಹಂತವಾದ 3 ತಂಡಗಳ 16 ಗುಂಪುಗಳನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಚರ್ಚಿಸಲಾಗಿದೆ.
ಸೆಪ್ ಬ್ಲಾಟರ್'ನಿಂದ ತೆರವಾದ ಸ್ಥಾನಕ್ಕೆ ಕಳೆದ ಫೆಬ್ರವರಿಯಲ್ಲಿ ಇನ್'ಫ್ಯಾಂಟಿನೊ ಆಯ್ಕೆಯಾಗಿದ್ದರು.
ಒಂದೊಮ್ಮೆ ಫಿಫಾ ಆಡಳಿತ ಮಂಡಳಿಯ 211 ಮಂದಿ ಸದಸ್ಯರು ಮನವಿಯನ್ನು ತಿರಸ್ಕರಿಸಿದರೆ ವಿಶ್ವಕಪ್ ಟೂರ್ನಿ ನಡೆಯುವುದಿಲ್ಲ.
