Asianet Suvarna News Asianet Suvarna News

ಫಿಫಾ ವಿಶ್ವಕಪ್ 2018: ರಷ್ಯಾ v/s ಸೌದಿ ಅರೇಬಿಯಾ ಪಂದ್ಯದಲ್ಲಿ ಯಾರಿಗೆ ಮೇಲುಗೈ?

ಫಿಫಾ ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನು ಕೆಲಗಂಟೆಗಳು ಮಾತ್ರ ಬಾಕಿ. ಮೊದಲ ಪಂದ್ಯದಲ್ಲಿ ಆತಿಥೇಯ ರಷ್ಯಾ ಹಾಗೂ ಸೌದಿ ಅರೇಬಿಯಾ ಹೋರಾಟ  ನಡೆಸಲಿದೆ. ಉಭಯ ತಂಡಗಳ ಬಲಾಬಲ ಹೇಗಿದೆ. ಇಲ್ಲಿದೆ ವಿವರ

FIFA 2018: Russia v Saudi Arabia Preview

ರಷ್ಯಾ(ಜೂನ್.14): ಫಿಫಾ ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯ ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಆತಿಥೇಯ ರಷ್ಯಾ ಹಾಗೂ ಸೌದಿ ಅರೇಬಿಯಾ ಮುಖಾಮುಖಿಗೆ ವೇದಿಕೆ ರೆಡಿಯಾಗಿದೆ. ಮಾಸ್ಕೋದ ಲಝ್ನಿಕಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಗೆಲುವು ಸಾಧಿಸಿ, ಟೂರ್ನಿಯಲ್ಲಿ ಶುಭಾರಂಭ ಮಾಡಲು ಉಭಯ ತಂಡಗಳು ಕಸರತ್ತು ನಡೆಸಿದೆ. ತವರಿನ ಅಭಿಮಾನಿಗಳ ಮುಂದೆ ಕಣಕ್ಕಿಳಿಯುತ್ತಿರುವ ರಷ್ಯಾ, ಭರ್ಜರಿ ಗೆಲುವನ್ನ ಎದುರುನೋಡುತ್ತಿದೆ.

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೆ ಅತಿಥೇಯ ತಂಡ ತನ್ನ ಮೊದಲ ಪಂದ್ಯದಲ್ಲಿ ಸೋತಿಲ್ಲ. ಆದರೆ ರಷ್ಯಾ ಕಳೆದ ಅಕ್ಟೋಬರ್‌ನಲ್ಲಿ ಕೊರಿಯಾ ತಂಡವನ್ನ ಸೋಲಿಸಿದ ಬಳಿಕ ಸತತ 7 ಪಂದ್ಯದಲ್ಲಿ ಸೋಲನ್ನ ಅನುಭವಿಸಿದೆ.

ರಷ್ಯಾದ ಜೊತೆಗೆ ಸೌದಿ ಅರೇಬಿಯಾದ ಕತೆ ಕೂಡ ಭಿನ್ನವಾಗಿಲ್ಲ. ಸತತ 3  ಫ್ರೆಂಡ್ಲೀ ಪಂದ್ಯಗಳನ್ನ ಸೋತಿರುವ ಸೌದಿ, ಇದೀಗ ಗೆಲುವಿನ ವಿಶ್ವಾಸದಲ್ಲಿದೆ. ಉಭಯ ತಂಡಗಳ ಸಮತೋಲದಿಂದ ಕೂಡಿದೆ. ಆದರೆ ಮೊದಲ ಪಂದ್ಯದ ಒತ್ತಡವನ್ನ ನಿಭಾಯಿಸಿದ ತಂಡ ಗೆಲುವಿನ ನಗೆ ಬೀರಲಿದೆ.

ಮೊದಲ ಪಂದ್ಯಕ್ಕೂ ಮುನ್ನ ಲಝ್ನಿಕಿ ಕ್ರೀಡಾಂಗಣದಲ್ಲಿ ವರ್ಣರಂಜಿತ ಉದ್ಘಾಟನಾ ಸಮಾರಂಭ ನಡೆಯಲಿದೆ. ಬ್ರೀಟಿಷ್ ಪಾಪ್ ಸಿಂಗ್ ರಾಬಿ ವಿಲಿಯಮ್ಸ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಕಾರ್ಯಕ್ರಮ ನಡೆಸಿ  ಕೊಡಲಿದ್ದಾರೆ.

ಪಂದ್ಯ: ಮೊದಲ ಪಂದ್ಯ(ರಷ್ಯಾ vs ಸೌದಿ ಅರೇಬಿಯಾ)
ಸಮಯ: ರಾತ್ರಿ 8.30
ಕ್ರೀಡಾಂಗಣ: ಲಝ್ನಿಕಿ ಕ್ರೀಡಾಂಗಣ, ಮಾಸ್ಕೋ
 

Follow Us:
Download App:
  • android
  • ios