ಮೊದಲ ಪಂದ್ಯದಲ್ಲಿ ಕೊರಿಯಾ ವಿರುದ್ಧ ಗೆದ್ದಿದ್ದ ಸ್ವೀಡನ್ ಈ ಪಂದ್ಯದಲ್ಲಿ ಜಯಿಸಿದ್ದರೆ ಪ್ರಿ ಕ್ವಾರ್ಟರ್‌ಗೇರುತ್ತಿತ್ತು. ಆದರೆ ಕೊನೆಯ ಕ್ಷಣದ ಸೋಲಿನಿಂದಾಗಿ ಸ್ವೀಡನ್ ಆಘಾತ ಅನುಭವಿಸಿದರೂ, ನಾಕೌಟ್ ಹಾದಿಯನ್ನು ಉಳಿಸಿಕೊಂಡಿದೆ.

ಸೋಚಿ(ಜೂ.24]: ಹೆಚ್ಚುವರಿ ಅವಧಿಯ ಕಡೆಯ ನಿಮಿಷದಲ್ಲಿ ದೊರೆತ ಫ್ರೀ ಕಿಕ್‌ನಲ್ಲಿ ಟೋನಿ ಕ್ರೂಸ್ ದಾಖಲಿಸಿದ ಅದ್ಭುತ ಗೋಲಿನ ನೆರವಿನಿಂದ ಜರ್ಮನಿ 2-1 ಗೋಲುಗಳಿಂದ ಸ್ವೀಡನ್ ಎದುರು ಗೆಲುವು ಸಾಧಿಸಿತು. ಇದರೊಂದಿಗೆ ಜರ್ಮನಿಯ ಪ್ರಿ ಕ್ವಾರ್ಟರ್ ಹಾದಿ ಇನ್ನೂ ಜೀವಂತವಾಗಿದೆ.

ಮೊದಲ ಪಂದ್ಯದಲ್ಲಿ ಕೊರಿಯಾ ವಿರುದ್ಧ ಗೆದ್ದಿದ್ದ ಸ್ವೀಡನ್ ಈ ಪಂದ್ಯದಲ್ಲಿ ಜಯಿಸಿದ್ದರೆ ಪ್ರಿ ಕ್ವಾರ್ಟರ್‌ಗೇರುತ್ತಿತ್ತು. ಆದರೆ ಕೊನೆಯ ಕ್ಷಣದ ಸೋಲಿನಿಂದಾಗಿ ಸ್ವೀಡನ್ ಆಘಾತ ಅನುಭವಿಸಿದರೂ, ನಾಕೌಟ್ ಹಾದಿಯನ್ನು ಉಳಿಸಿಕೊಂಡಿದೆ.

Scroll to load tweet…

ಪಂದ್ಯದ ಆರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಇಳಿದ ಹಾಲಿ ಚಾಂಪಿಯನ್ ಜರ್ಮನಿಗೆ ಸ್ವೀಡನ್‌ನ ರಕ್ಷಣಾತ್ಮಕ ಕೋಟೆಯನ್ನು ದಾಟುವುದು ಅಸಾಧ್ಯ ಎನಿಸಿತ್ತು. 32ನೇ ನಿಮಿಷದಲ್ಲಿ ಜರ್ಮನಿ ಗೋಲ್‌ಕೀಪರ್ ನೆಯುರ್‌ರನ್ನು ವಂಚಿಸಿದ ಟೈವೋನೆನ್ ಆಕರ್ಷಕ ಗೋಲು ದಾಖಲಿಸಿದರು. 

ದ್ವಿತೀಯಾರ್ಧದ 48ನೇ ನಿಮಿಷದಲ್ಲಿ ಮಾರ್ಕೊ ರೂಸ್, 90+5ನೇ ನಿಮಿಷದಲ್ಲಿ ಟೋನಿ ಕ್ರೂಸ್ ಗೋಲುಗಳಿಸಿದರು.