ಫಿಫಾ ವಿಶ್ವಕಪ್ 2018: ಕೊಲಂಬಿಯಾ ಮಣಿಸಿದ ಜಪಾನ್
ಜಪಾನ್ ಹಾಗೂ ಕೊಲಂಬಿಯಾ ನಡುವಿನ ಫಿಪಾ ವಿಶ್ವಕಪ್ ಪಂದ್ಯ ಅಭಿಮಾನಿಗಳಿಗೆ ರಸದೌತಣ ನೀಡಿದೆ. ಆರಂಭದಲ್ಲಿ ಜಪಾನ್ ಮೇಲುಗೈ ಸಾಧಿಸಿದರೆ, ಬಳಿಕ ಕೊಲಂಬಿಯಾ ಅಬ್ಬರಿಸಿತು. ಅಂತಿಮ ಹಂತದಲ್ಲಿ ಜಪಾನ್ ಕಮ್‌ಬ್ಯಾಕ್ ಮಾಡೋ ಮೂಲಕ ಗೆಲುವಿನ ನಗೆ ಬೀರಿದೆ. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ರಷ್ಯಾ(ಜೂ.19): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಜಪಾನ್ ಶುಭಾರಂಭ ಮಾಡಿದೆ. ಮೊರ್ಡೋವಿಯಾ ಅರೆನಾ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಜಪಾನ್, ಕೊಲಂಬಿಯಾ ತಂಡವನ್ನ 2-1 ಗೋಲುಗಳ ಅಂತರದಲ್ಲಿ ಮಣಿಸಿದೆ.
ಪಂದ್ಯ ಆರಂಭಕ್ಕೂ ಮೊದಲೇ ಕೊಲಂಬಿಯಾ ತಂಡಕ್ಕೆ ಆಘಾತ ಎದುರಾಗಿತ್ತು. ತಂಡದ ಸ್ಟಾರ್ ಆಟಗಾರ ಜೇಮ್ಸ್ ರೋಡ್ರಿಗ್ರೆಸ್ ಇಂಜುರಿಯಿಂದ ಮೈದಾನಕ್ಕೆ ಇಳಿಯಲೇ ಇಲ್ಲ. ಹೀಗಾಗಿ ಕೊಲಂಬಿಯಾ 10 ಆಟಗಾರರೊಂದಿಗೆ ಪಂದ್ಯವಾಡಿತು. ಇದರ ಲಾಭ ಪಡೆಜ ಜಪಾನ್ 6ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿತು. ಜಪಾನ್ ತಂಡದ ಶಿಂಜಿ ಕಗವಾ ಗೋಲು ಸಿಡಿಸಿದರು.
ಒರ್ವ ಆಟಗಾರನ ಅಲಭ್ಯರಾದರೂ ಕೊಲಂಬಿಯಾ ಕೂಡ ಅತ್ಯುತ್ತಮ ಹೋರಾಟ ನೀಡಿತು. 39ನೇ ನಿಮಿಷದಲ್ಲಿ ಜುವಾನ್ ಕ್ವಿಂಟೆರೋ ಗೋಲು ಬಾರಿಸೋ ಮೂಲಕ 1-1 ಅಂತರದಲ್ಲಿ ಸಮಭಲಗೊಂಡಿತು. ಮೊದಲಾರ್ಧದ ಅಂತ್ಯದಲ್ಲಿ ಉಭಯ ತಂಡಗಳು 1-1 ಅಂತರ ಕಾಪಾಡಿಕೊಂಡಿತು.
ದ್ವಿತಿಯಾರ್ಧದಲ್ಲಿ ಜಪಾನ್ ಆಕ್ರಮಣಕಾರಿ ಆಟವಾಡಿತು. 79ನೇ ನಿಮಿಷದಲ್ಲಿ ಯೋಯೋ ಒಸಾಕೋ ಗೋಲು ಬಾರಿಸಿ ಜಪಾನ್ ತಂಡಕ್ಕೆ 2-1 ಮುನ್ನಡೆ ತಂದುಕೊಟ್ಟರು. ಸಮಭಲಕ್ಕಾಗಿ ಅಂತಿಮ ನಿಮಿಷದವರೆಗೂ ಕೊಲಂಬಿಯಾ ಹೋರಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ ಜಪಾನ್ 2-1 ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು.