ಫಿಫಾ ವಿಶ್ವಕಪ್ 2018: ಡೆನ್ಮಾರ್ಕ್ -ಕ್ರೊವೇಷಿಯಾ ನಾಕೌಟ್ ಹೋರಾಟ

FIFA 2018 :Croatia take on Denmark in midfield battle
Highlights

ಫಿಫಾ ವಿಶ್ವಕಪ್ ಟೂರ್ನಿಯ ಇಂದಿನ ನಾಕೌಟ್ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ. ಬಲಿಷ್ಠ ಕ್ರೊವೇಷಿಯಾ ಹಾಗೂ ಡೆನ್ಮಾರ್ಕ್ ನಡುವಿನ ಹೋರಾಟದಲ್ಲಿ ಗೆಲುವಿನ ಸಿಹಿ ಯಾರಿಗೆ? ಇಲ್ಲಿದೆ ವಿವರ

ನಿಜ್ನಿ ನೊವ್ಗೊರೊಡ್‌ (ಜು.01): ಫಿಫಾ ವಿಶ್ವಕಪ್ ಟೂರ್ನಿಯ ನಾಕೌಟ್ ಪಂದ್ಯಗಳಲ್ಲಿ ರೋಚಕ ಹೋರಾಟ ಅಭಿಮಾನಿಗಳ ಎದೆಬಡಿತವನ್ನ ಹೆಚ್ಚಿಸುತ್ತಿದೆ. ಇಂದಿನ ಪ್ರೀ ಕ್ವಾರ್ಟರ್ ಪಂದ್ಯದಲ್ಲಿ ಬಲಿಷ್ಠ ಕ್ರೊವೇಷಿಯಾ ಹಾಗೂ ಡೆನ್ಮಾರ್ಕ್ ಮುಖಾಮುಖಿಯಾಗಲಿದೆ.

ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ಹ್ಯಾಟ್ರಿಕ್ ಗೆಲುು ಸಾಧಿಸಿ ನಾಕೌಟ್ ಹಂತಕ್ಕೆರಿದ ಕ್ರೊವೇಷಿಯಾ, ಇದೀಗ ಡೆನ್ಮಾರ್ಕ್ ವಿರುದ್ಧ ಗೆಲವಿನ ವಿಶ್ವಾಸದಲ್ಲಿದೆ. ನೈಜಿರಿಯಾ, ಐಸ್‌ಲೆಂಡ್ ಹಾಗೂ ಬಲಿಷ್ಠ ಅರ್ಜೆಂಟೀನಾ ತಂಡಗಳಿಗೆ ಸೋಲುಣಿಸಿರುವ ಕ್ರೊವೆಷಿಯಾ ಫಿಪಾ ವಿಶ್ವಕಪ್ ಟೂರ್ನಿಯ ಪ್ರಶಸ್ತಿ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ.

ಡೆನ್ಮಾರ್ಕ್ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿತ್ತು. 1 ಗೆಲುವು ಹಾಗೂ 2 ಡ್ರಾ ಸಾಧಿಸಿ ನಾಕೌಟ್ ಹಂತಕ್ಕೆ ಪ್ರವೇಶ ಪಡೆದಿತ್ತು. ಆದರೆ ಇಂದಿನ ನಾಕೌಟ್ ಪಂದ್ಯದಲ್ಲಿ ಕ್ರೊವೇಷಿಯಾ ಗೆಲುವಿನ ಆಸೆಗೆ ತಣ್ಣೀರೆರಚಲು ರೆಡಿಯಾಗಿದೆ.
 

loader