Asianet Suvarna News Asianet Suvarna News

ಕಳಪೆ ಫೀಲ್ಡಿಂಗ್'ನಿಂದ 4 ಸೋಲು ಆದರೂ ಬದಲಾಗಲಿಲ್ಲ ಭಾರತದ ಫೀಲ್ಡಿಂಗ್ ಕೋಚ್!: ಶ್ರೀಧರ್ ಬೆನ್ನಿಗೆ ಶಾಸ್ತ್ರಿ

ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್​ ಅವರನ್ನ ಮುಂದುವರೆಸಿದ್ದು ಗುಡ್​ ನ್ಯೂಸ್. ಜಹೀರ್ ಖಾನ್​ರನ್ನ ಬೌಲಿಂಗ್ ಕೋಚ್ ಆಗಿ ನೇಮಕ​ ಮಾಡಿದ್ದು ಒಳ್ಳೆಯದೆ. ಆದರೆ ಫೀಲ್ಡಿಂಗ್ ಕೋಚ್​ನನ್ನ ಯಾಕೆ ಚೇಂಜ್ ಮಾಡಲಿಲ್ಲ ಅನ್ನೋ ಪ್ರಶ್ನೆಯನ್ನ ಕ್ರಿಕೆಟ್ ಅಭಿಮಾನಿಗಳು ಕೇಳುತ್ತಿದ್ದಾರೆಳ್ತಿದ್ದಾರೆ. ಅವರು ಈ ಪ್ರಶ್ನೆ ಯಾಕೆ ಕೇಳುತ್ತಿದ್ದಾರೆ ಗೊತ್ತಾ. ಅವರಿಗೇನು ಫೀಲ್ಡಿಂಗ್ ಕೋಚ್ ಶ್ರೀಧರ್ ಮೇಲೆ ಏನು ಸಿಟ್ಟಾ? ಕೋಪನಾ? ಸೇಡಾ? ಇದಾವುದು ಅಲ್ಲ. ಬದಲಿಗೆ ಆ 4 ಸೋಲುಗಳಿಗೆ ಶ್ರೀಧರ್​ ನೇರ ಹೊಣೆ.

Fielding Coach Of Team India Not Yet Changed

ಮುಂಬೈ(ಜು.14): ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್​ ಅವರನ್ನ ಮುಂದುವರೆಸಿದ್ದು ಗುಡ್​ ನ್ಯೂಸ್. ಜಹೀರ್ ಖಾನ್​ರನ್ನ ಬೌಲಿಂಗ್ ಕೋಚ್ ಆಗಿ ನೇಮಕ​ ಮಾಡಿದ್ದು ಒಳ್ಳೆಯದೆ. ಆದರೆ ಫೀಲ್ಡಿಂಗ್ ಕೋಚ್​ನನ್ನ ಯಾಕೆ ಚೇಂಜ್ ಮಾಡಲಿಲ್ಲ ಅನ್ನೋ ಪ್ರಶ್ನೆಯನ್ನ ಕ್ರಿಕೆಟ್ ಅಭಿಮಾನಿಗಳು ಕೇಳುತ್ತಿದ್ದಾರೆಳ್ತಿದ್ದಾರೆ. ಅವರು ಈ ಪ್ರಶ್ನೆ ಯಾಕೆ ಕೇಳುತ್ತಿದ್ದಾರೆ ಗೊತ್ತಾ. ಅವರಿಗೇನು ಫೀಲ್ಡಿಂಗ್ ಕೋಚ್ ಶ್ರೀಧರ್ ಮೇಲೆ ಏನು ಸಿಟ್ಟಾ? ಕೋಪನಾ? ಸೇಡಾ? ಇದಾವುದು ಅಲ್ಲ. ಬದಲಿಗೆ ಆ 4 ಸೋಲುಗಳಿಗೆ ಶ್ರೀಧರ್​ ನೇರ ಹೊಣೆ.

ಕಳಪೆ ಫೀಲ್ಡಿಂಗ್'​ನಿಂದ ಭಾರತಕ್ಕೆ 4 ಸೋಲು

ಟೀಂ ಇಂಡಿಯಾ ಒಂದುವರೆ ತಿಂಗಳಲ್ಲಿ 4 ಪಂದ್ಯಗಳನ್ನು ಸೋತಿದೆ. ಆ 4 ಮ್ಯಾಚ್'​ಗಳೊಮ್ಮೆ ನೋಡಿದರೆ ಗೊತ್ತಾಗುತ್ತದೆ. ಯಾಕೆ ಫೀಲ್ಡಿಂಗ್ ಕೋಚ್ ಬದಲಾಗಬೇಕಿತ್ತು ಅಂತ. ಇಷ್ಟೇ ಅಲ್ಲ ಕಳೆದೊಂದು ವರ್ಷದಿಂದಲೂ ಭಾರತೀಯ ಫೀಲ್ಡಿಂಗ್ ತೀರ ಕಳಪೆಯಾಗಿದೆ. ಕೈಗೆ ಸಿಕ್ಕ ಕ್ಯಾಚ್'​ಗಳನ್ನ ಡ್ರಾಪ್ ಮಾಡುವುದು, ಮಿಸ್ ಫೀಲ್ಡಿಂಗ್ ಲೆಕ್ಕವೇ ಇಲ್ಲ.

ಕಳಪೆ ಫೀಲ್ಡಿಂಗ್'​ನಿಂದ ಲಂಕಾ-ಪಾಕ್ ವಿರುದ್ಧ ಸೋಲು

ಐಸಿಸಿ ಚಾಂಪಿಯನ್ಸ್ ಟ್ರೋಫಿ ಭಾರತೀಯರ ಕೈತಪ್ಪಲು ಫೀಲ್ಡಿಂಗ್ ಕಾರಣ. ಶ್ರೀಲಂಕಾ ವಿರುದ್ಧ ಹೀನಾಯ ಸೋಲಿಗೆ ಕಳೆ ಫೀಲ್ಡಿಂಗ್ ಕಾರಣ. ಇನ್ನು ಬದ್ಧವೈರಿ ಪಾಕಿಸ್ತಾನ ವಿರುದ್ಧ ಫೈನಲ್ ಮ್ಯಾಚ್ ಸೋಲಿಗೂ ಇದೇ ಫೀಲ್ಡಿಂಗ್ ಕಾರಣ. ಕೇವಲ ಕ್ಯಾಚ್ ಡ್ರಾಪ್ ಮಾಡಿದ್ದು ಅಷ್ಟೇ ಅಲ್ಲ, ಮಿಸ್ ಫೀಲ್ಡಿಂಗ್​ಗೆ ಲೆಕ್ಕವೇ ಇಲ್ಲ. ಒಂಟಿ ರನ್ ಕೊಡೊ ಕಡೆ 2-3 ರನ್ ಬಿಟ್ಟುಕೊಟ್ಟಿದ್ದು. ತಡೆಯಬಹುದಾಗಿದ್ದ ಬೌಂಡ್ರಿಗಳನ್ನ ಬಿಟ್ಟುಕೊಟ್ಟು ಎದುರಾಳಿ ಸುಲಭದ ಜಯ ಸಾಧಿಸಲು ಕಾರಣರಾದರು ಭಾರತೀಯರು.

ದುರ್ಬಲ ವಿಂಡೀಸ್ ವಿರುದ್ಧದ ಎರಡು ಸೋಲಿಗೂ ಇದೇ ಫೀಲ್ಡಿಂಗ್ ಕಾರಣವಾಯ್ತು. ಟಿ20 ಪಂದ್ಯದ ಸೋಲಿಗೆ ಮೇನ್ ರೀಸನ್ ಅಂದ್ರೆ ಭಾರತೀಯ ಆಟಗಾರರ ಕಳಪೆ ಫೀಲ್ಡಿಂಗ್. ಒಂದಲ್ಲ ಎರಡಲ್ಲ ಹತ್ತಾರು ಮಿಸ್ ಫೀಲ್ಡ್​​ಗಳನ್ನ ಮಾಡಿದ್ರು. ಕ್ಯಾಚ್​​​ಗಳು ಡ್ರಾಪ್ ಆದ್ವು. ಎವಿನ್ ಲೆವಿಸ್​ 46 ರನ್ ಗಳಿಸಿದ್ದಾಗ ಶಮಿ-ಕೊಹ್ಲಿ ಇಬ್ಬರೂ ಸೇರಿಕೊಂಡು ಕ್ಯಾಚ್ ಹಿಡಿಯಲಿಲ್ಲ. ಅದೇ ಲೆವಿಸ್ 55 ರನ್ ಗಳಿಸಿದ್ದಾಗ ದಿನೇಶ್ ಕಾರ್ತಿಕ್ ಕ್ಯಾಚ್ ಡ್ರಾಪ್ ಮಾಡಿದ್ರು. ಇದೇ ಲಾಭ ಪಡೆದುಕೊಂಡ ಲೆವಿಸ್ ಭರ್ಜರಿ ಸೆಂಚುರಿ ಸಿಡಿಸಿ ಭಾರತವನ್ನ ಸೋಲಿಸಿದ್ರು.

ಭರತ್ ಅರುಣ್ ಚೇಂಜ್ ಆದ್ರು, ಜಹೀರ್ ಖಾನ್ ಬಂದ್ರು: ಶ್ರೀಧರ್ ಚೇಂಜ್ ಆಗಲಿಲ್ಲ.. ಕೈಫ್ ಬರಲಿಲ್ಲ..

ನೂತನ ಕೋಚ್ ರವಿಶಾಸ್ತ್ರಿ ತಮ್ಮ ಸಂದರ್ಶನದಲ್ಲೇ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಕೋಚ್ ಯಾಱರು ಬೇಕು ಅಂತ ಕಂಡೀಶನ್ ಹಾಕಿದ್ರು. ಸಂಜಯ್ ಬಂಗಾರ್​, ಭರತ್ ಅರುಣ್ ಮತ್ತು ಶ್ರೀಧರ್​ ಬೇಕೇ ಬೇಕು ಅಂತ ಹಠ ಹಿಡಿದಿದ್ದರು. ಆದ್ರೆ ಸೌರವ್ ಗಂಗೂಲಿ ಹಠಮಾಡಿ ಭರತ್ ಅರುಣ್ ಬದಲು ಜಹೀರ್ ಖಾನ್​ರನ್ನ ಬೌಲಿಂಗ್ ಕೋಚ್ ಮಾಡಿದ್ರು. ಆದ್ರೆ ಮೊಹಮ್ಮದ್​ ಕೈಫ್ ನಾನು ಫೀಲ್ಡಿಂಗ್ ಕೋಚ್ ಆಗ್ತೇನೆ ಅನ್ನೋ ಕೂಗು ಯಾರಿಗೂ ಕೇಳಿಸಲಿಲ್ಲ. ಪಾಪ ಅವರ ಕೂಗು ಕೇಳಿಸಿದ್ದು ಕೇವಲ ಮಾಧ್ಯಮಗಳಿವೆ.

​ಬದಲಾಗಲೇಬೇಕಿದೆ ಫೀಲ್ಡಿಂಗ್ ಕೋಚ್: ಕೈಫ್ ಸೇವೆ ಭಾರತಕ್ಕೆ ಬೇಕೇ ಬೇಕಿದೆ

ಹೌದು, ಭಾರತದ ಫೀಲ್ಡಿಂಗ್ ಉತ್ತಮವಾಗಬೇಕಾದ್ರೆ, ಈಗ ಫೀಲ್ಡಿಂಗ್ ಕೋಚ್ ಶ್ರೀಧರ್ ಅವರನ್ನ ಚೇಂಜ್ ಮಾಡಲೇಬೇಕಿದೆ. ಆ ಸ್ಥಾನಕ್ಕೆ ಮೊಹಮ್ಮದ್ ಕೈಫ್ ನೇಮಿಸಬೇಕು. ಕೈಫ್ ಎಂತಹ ಫೀಲ್ಡರ್ ಅನ್ನೋದು ಎಲ್ಲರಿಗೂ ಗೊತ್ತಿದೆ. ಭಾರತ ಕ್ರಿಕೆಟ್ ಕಂಡ ನಂಬರ್ ವನ್ ಫೀಲ್ಡರ್. ಅಂತಹ ಆಟಗಾರನಿಗೆ ಫೀಲ್ಡಿಂಗ್ ಕೋಚ್ ಆಗೋಕೆ ಅರ್ಹತೆ ಇಲ್ಲವೆ. ಅಥವಾ ಅವರೇ ಹುಡುಕಿಕೊಂಡು ಅರ್ಜಿ ಹಾಕಬೇಕಾ? ಟೀಂ ಇಂಡಿಯಾದ ಫೀಲ್ಡಿಂಗ್ ಸುಧಾರಿಸಬೇಕಾದ್ರೆ ಮೊದ್ಲು ಫೀಲ್ಡಿಂಗ್ ಕೋಚ್ ಚೇಂಜ್ ಮಾಡಿ. ಇಲ್ಲವಾದ್ರೆ ಅದೇರಾಗ ಅದೇಹಾಡು ಅನ್ನೋ ಹಾಗೆ ಬ್ಯಾಟಿಂಗ್ ಮತ್ತು ಬೌಲಿಂಗ್ ಅದ್ಭುತವಾಗಿರುತ್ತೆ. ಕಳಪೆ ಫೀಲ್ಡಿಂಗ್ ಪಂದ್ಯವನ್ನ ಸೋಲಿಸುತ್ತೆ.

 

Follow Us:
Download App:
  • android
  • ios