Asianet Suvarna News Asianet Suvarna News

ಈಡನ್​​ನಲ್ಲಿ ವೇಗಿಗಳ ಕಮಾಲ್​​ ! ವೇಗಿಗಳಿಗೆ ಸಿಕ್ಕ ವಿಕೆಟ್ ಎಷ್ಟು..?

fast bowlers in Eden

ಕೊಲ್ಕತ್ತಾ(ಅ.03): ಭಾರತ-ನ್ಯೂಜಿಲೆಂಡ್​​​ 2ನೇ ಟೆಸ್ಟ್​​'ಗೆ ಸಾಕ್ಷಿಯಾಗಿರುವ ಈಡನ್​ ಗಾರ್ಡನ್ಸ್​​​ ಪಿಚ್​ ಆರಂಭಕ್ಕೂ ಮುನ್ನ​ ಸಾಕಷ್ಟು ಕುತೂಹಲ ಮೂಡಿಸಿತ್ತು. ಯಾಕಂದರೆ ಕಾನ್ಪುರದ ಸ್ಪಿನ್​​ ಪಿಚ್​​ನಲ್ಲಿ ಟೀಮ್​​ ಇಂಡಿಯಾ ಪ್ರಭಾಲ್ಯ ಮೆರದಿತ್ತು. ಹೀಗಾಗಿ 2ನೇ ಟೆಸ್ಟ್​​​ನಲ್ಲೂ ಸ್ಪಿನ್​​ ಕಮಾಲ್​ ನಡೆಯಬಹುದು ಅನ್ನೋದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಅದು ಹುಸಿಯಾಗಿದೆ. 

ಈಡನ್​​ನಲ್ಲಿ ವೇಗಿಗಳ ಕಮಾಲ್​​ ! ಮೊದಲ ಇನ್ನಿಂಗ್ಸ್​​ನಲ್ಲೇ 15 ವಿಕೆಟ್​​​ !
ಕಾನ್ಪುರದಲ್ಲಿ ಭಾರತೀಯ ಸ್ಪಿನ್ನರ್ಸ್​​​ಗಳು ಕಮಾಲ್​​ ಮಾಡಿದರು, ಇದೀಗ ಈಡನ್​​ ಗಾರ್ಡನ್ಸ್​​ನಲ್ಲಿ ವೇಗಿಗಳು ಕಮಾಲ್​​ ಮಾಡ್ತಿದ್ದಾರೆ. ಹೌದು, ಈಡನ್​​ನ ಈ ಹೊಸ ಪಿಚ್​​​ ವೇಗಿಗಳಿಗೆ ಪೂರಕವಾಗಿದೆ. ಹೀಗಾಗಿ ಮೊದಲ ಇನ್ನಿಂಗ್ಸ್​​ನಲ್ಲಿಯೇ ವೇಗಿಗಳು ಬರೋಬ್ಬರಿ 15 ವಿಕೆಟ್​​ ಉರುಳಿಸುವ ಮೂಲಕ ಗಮನ ಸೆಳೆದಿದ್ದಾರೆ. ಉಳಿದ 5 ವಿಕೆಟ್​​ಗಳು ಮಾತ್ರವೇ ಸ್ಪಿನ್ನರ್ಸ್​​​'ಗಳಿಗೆ ಸಿಕ್ಕಿದೆ. 

ಭಾರತೀಯ ವೇಗಿಗಳಿಗೆ 8 ವಿಕೆಟ್​​ 
ಈಡನ್ಸ್​​ನಲ್ಲಿ ಎರಡೂ ತಂಡದ ವೇಗಿಗಳು ವಿಕೆಟ್​​​ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ತವರಿನ ಲಾಭ ಪಡೆದುಕೊಂಡಿರುವ ಭಾರತೀಯರು ಕೊಂಚ ಮೇಲುಗೈ ಸಾಧಿಸಿದ್ದಾರೆ. ಹೌದು, ಒಟ್ಟಾರೆ ವೇಗಿಗಳು ಪಡೆದುಕೊಂಡಿರುವ 15 ವಿಕೆಟ್​​ಗಳ ಪೈಕಿ ಭಾರತೀಯ ಫಾಸ್ಟ್​​ ಬೌಲರ್ಸ್​​​​ 8 ವಿಕೆಟ್​​ ಉರುಳಿಸಿದ್ದಾರೆ. 

ಕಮಾಲ್​​ ಮಾಡಿದ ಭುವನೇಶ್ವರ್​​ 
ಟೀಮ್​​ ಇಂಡಿಯಾ ಕೇವಲ ಇಬ್ಬರು ವೇಗಿಗಳನ್ನು ಮಾತ್ರವೇ ಕಣಕ್ಕೆ ಇಳಿಸಿದೆ. ಇದ್ರಲ್ಲಿಯೇ 8 ವಿಕೆಟ್​​ ಪಡೆಯುವಲ್ಲಿ  ಭುವಿ ಹಾಗೂ ಶಮಿ ಯಶಸ್ವಿಯಾಗಿದ್ದಾರೆ. ಅದ್ರಲ್ಲಿಯೂ ಭುವನೇಶ್ವರ್​​​ ಬರೋಬ್ಬರಿ 5 ವಿಕೆಟ್​​ ಪಡೆಯುವ ಮೂಲಕ ಗಮನ ಸೆಳೆದರು. ಇನ್ನು ಭುವಿಗೆ ತವರಿನ ಪಿಚ್​​ನಲ್ಲಿ ಸಿಕ್ಕ ಮೊದಲ 5 ವಿಕೆಟ್​​ ಸಾಧನೆಯೂ ಇದಾಗಿದೆ. ಮತ್ತೋರ್ವ ವೇಗಿ ಶಮಿ ನಾನೇನೂ ಕಮ್ಮಿ ಇಲ್ಲ ಅಂತ 3 ವಿಕೆಟ್​​ ಗಳಿಸಿದ್ದಾರೆ.  

ಭಾರತೀಯ ಫಾಸ್ಟ್​​ ಬೌಲರ್ಸ್​​ಗಳು 8 ವಿಕೆಟ್​​ ಉರುಳಿಸಿದರು, ಅದಕ್ಕೂ ಮುನ್ನ ಕಿವೀಸ್​​ ವೇಗಿಗಳು 7 ವಿಕೆಟ್​​ ಉರುಳಿಸಿದರು. ಇದರಿಂದ ಈಡನ್​​ ಪಿಚ್​​ ವೇಗಿಗಳಿಗೆ ಪೂರಕವಾಗಿದೆ ಅನ್ನೋದು ಸಾಕ್ಷಿಯಾಗಿದೆ. 

ನ್ಯೂಜಿಲೆಂಡ್​​​ ಮೂವರು ವೇಗಿಗಳನ್ನು ಕಣಕ್ಕೆ ಇಳಿಸಿದೆ. ಇದರಲ್ಲಿ ಮ್ಯಾಟ್​​ ಹೆನ್ರಿ 3 ವಿಕೆಟ್​​ ಪಡ್ಕೊಂಡರೆ, ಟ್ರೆಂಟ್​ ಬೋಲ್ಟ್​​​ ಹಾಗೂ ನೈಲ್​ ವ್ಯಾಗನರ್​​ ತಲಾ ಎರಡೇರೆಡು ವಿಕೆಟ್​​ ಉರುಳಿಸಿದರು. 

ಮೊದಲ ಇನ್ನಿಂಗ್ಸ್​​​ನಲ್ಲಿ ಭಾರತೀಯ ವೇಗಿಗಳು ಮಿಂಚಿರೋ ರೀತಿಯಲ್ಲಿಯೇ 2ನೇ ಇನ್ನಿಂಗ್ಸ್​​ನಲ್ಲಿಯೂ ಕಮಾಲ್​​ ಮಾಡಿದ್ರೆ, ಟೀಮ್​​ ಇಂಡಿಯಾ ತನ್ನ ತವರಿನ 250ನೇ ಟೆಸ್ಟ್​​ ಗೆದ್ಕೊಳ್ಳುವುದರಲ್ಲಿ ಯಾವುದೇ ಡೌಟಿಲ್ಲ. ಅಲ್ಲದೆ  ಸರಣಿಯೂ ಭಾರತದ ಪಾಲಾಗಲಿದೆ. 

Latest Videos
Follow Us:
Download App:
  • android
  • ios