ನವದೆಹಲಿ(ಆ.13): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಟ್ವೀಟ್ ಮೂಲಕ ಸಿಡಿಸೋ ಸಿಕ್ಸರ್‌ಗಳು ವಿಶ್ವದಲ್ಲೆಡೆ ಸದ್ದು ಮಾಡುತ್ತಲೇ ಇದೆ. ಪ್ರತಿ ಬಾರಿ ಸೆಹ್ವಾಗ್ ಟ್ವೀಟ್ ಸಂಚಲನ ಮೂಡಿಸುತ್ತೆ. ಇದೀಗ ಸೆಹ್ವಾಗ್ ಆಯ್ಕೆ ಸಮಿತಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ ಸೆಹ್ವಾಗ್, ನನಗೆ ಸೆಲೆಕ್ಟರ್ ಆಗಬೇಕು. ನನಗೆ ಯಾರು ಅವಕಾಶ ಕೊಡುತ್ತಾರೆ ಎಂದು ಟ್ವಿಟರ್ ಮೂಲಕ ಪ್ರಶ್ನಿಸಿದ್ದರು. 

ಇದನ್ನೂ ಓದಿ: ಸೆಹ್ವಾಗ್ ಪತ್ನಿಗೆ 4.5 ಕೋಟಿ ರೂ ವಂಚಿಸಿದ ಬಿಸ್‌ನೆಸ್ ಪಾರ್ಟ್ನರ್!

ಸೆಹ್ವಾಗ್ ಟ್ವೀಟ್‌ಗೆ ಅಭಿಮಾನಿಗಳು ಉತ್ತರಿಸಿದ್ದಾರೆ. ಸೆಲೆಕ್ಟರ್ ಆಗಲು ಸೆಹ್ವಾಗ್‌ಗೆ ಸಾಧ್ಯವಿಲ್ಲ. ಕಾರಣ, ಆಯ್ಕೆಗಾರ ಅತೀ ಕಡಿಮೆ ಅಂತಾರಾಷ್ಟ್ರೀಯ ಪಂದ್ಯ ಆಡಿರಬೇಕು, ಬ್ಯಾಟಿಂಗ್ ಗೊತ್ತಿರಬೇಕು ಎಂದೇನಿಲ್ಲ. ಯಾವುದೇ ಸಾಧನೆ ಮಾಡಿರಬಾರದು. ಹೀಗಾಗಿ ಸೆಹ್ವಾಗ್‌ಗೆ ಸಾಧ್ಯವಿಲ್ಲ ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು, 3ಡಿ ಅರ್ಹತೆ ಇರಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.