ಧರ್ಮಶಾಲ(ಸೆ.15): ವೆಸ್ಟ್ ಇಂಡೀಸ್ ಪ್ರವಾಸದಿಂದ ವಿಶ್ರಾಂತಿ ಪಡೆದಿದ್ದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಸೌತ್ ಆಫ್ರಿಕಾ ವಿರುದ್ಧದ ಸರಣಿಗೆ ಮರಳಿದ್ದಾರೆ. ಧರ್ಮಶಾಲಾದಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯಕ್ಕೂ  ಮೊದಲು ಹಾರ್ದಿಕ್ ಪಾಂಡ್ಯ ಟ್ರೋಲ್ ಆಗಿದ್ದಾರೆ. ಟೀಂ ಇಂಡಿಯಾದ ನೂತನ ಜರ್ಸಿಯಲ್ಲಿ ಕಾಣಿಸಿಕೊಂಡ ಪಾಂಡ್ಯ ಮತ್ತೆ ಟ್ರೋಲಿಗರಿಗೆ ಆಹಾರವಾಗಿದ್ದಾರೆ.

ಇದನ್ನೂ ಓದಿ: ರ‍್ಯಾಂಪ್ ಮೇಲೆ ಹಾರ್ದಿಕ್ ವಾಕ್; ರಣವೀರ್ ಸಂಗ ಎಂದ ಫ್ಯಾನ್ಸ್!

ಸೌತ್ ಆಫ್ರಿಕಾ ಸರಣಿಯಿಂದ ಟೀಂ ಇಂಡಿಯಾ ಜರ್ಸಿ ಬದಲಾಗಿದೆ. ಇಷ್ಟು ದಿನ ಒಪ್ಪೋ ಪ್ರಾಯೋಜಕತ್ವ ಹೊಂದಿದ್ದ ಭಾರತದ  ಜರ್ಸಿ ಇದೀಗ ಬೆಂಗಳೂರು ಮೂಲದ ಬೈಜುಸ್ ಆ್ಯಪ್ ಆಧಾರಿತ ಶಿಕ್ಷಣ ಸಂಸ್ಥೆ ಪ್ರಾಯೋಜಕತ್ವ ಹೊಂದಿದೆ. ಈ ಜರ್ಸಿ ತೊಟ್ಟ ಹಾರ್ದಿಕ್ ಪಾಂಡ್ಯನನ್ನು ಟ್ರೋಲ್ ಮಾಡಲಾಗಿದೆ. ಕಾಫಿ ವಿಥ್ ಕರಣ್ ರಿಯಾಲಿಟಿ ಶೋನಲ್ಲಿ ವಿವಾದಿತ ಹೇಳಿಕೆ ನೀಡೋ ಮೂಲಕ ಟೀಕೆಗೆ ಗುರಿಯಾಗಿದ್ದ ಪಾಂಡ್ಯ, ಗುಣಮಟ್ಟದ ಶಿಕ್ಷಣ ಪಡೆದಿಲ್ಲ ಎಂದು ಟ್ರೋಲ್ ಮಾಡಲಾಗಿತ್ತು. ಇದೇ ಆಧಾರದಲ್ಲಿ ಇದೀಗ ಶಿಕ್ಷಣ ಪಡೆಯದ ವ್ಯಕ್ತಿ ಇದೀಗ ಶಿಕ್ಷಣ ಸಂಸ್ಥೆಯ ರಾಯಭಾರಿ ಎಂದು ಟ್ರೋಲ್ ಮಾಡಲಾಗುತ್ತಿದೆ.