ಮುಂಬೈ(ಸೆ.24): ಮಾಜಿ ಕ್ರಿಕೆಟಿಗ ಸಚಿನ್​ ತೆಂಡುಲ್ಕರ್​ ಅಭಿಮಾನಿಗಳು ಕೂಡ ಸಚಿನ್ ಬಯೋಪಿಕ್​ನ ಭಾಗವಾಗುವ ಅವಕಾಶವನ್ನು ಪಡೆಯಬಹುದಾಗಿದೆ. ಈ ಕುರಿತು ಸಚಿನ್​ ಟ್ವೀಟ್​ ಮಾಡಿದ್ದು, ನನ್ನ ಚಿತ್ರದಲ್ಲಿ ನನ್ನ ಅಭಿಮಾನಿಗಳು ಭಾಗಿಯಾಗಬಹುದು ಎಂದಿದ್ದಾರೆ. 

ಸಚಿನ್​​ ತೆಂಡುಲ್ಕರ್​ ಅವರ ಜೀವನಾಧರಿತ ಸಚಿನ್​ ಎ ಬಿಲಿಯನ್​ ಡ್ರೀಮ್ಸ್​ ಚಿತ್ರ ಸದ್ಯ ನಿರ್ಮಾಣ ಹಂತದಲ್ಲಿದ್ದು, ಸಚಿನ್​ ತೆಂಡುಲ್ಕರ್​ ಅವರಿಗೆ ಸಂಬಂಧಿಸಿದ ಯಾವುದೇ ವಿಡಿಯೋವನ್ನು ಅಭಿಮಾನಿಗಳು ಕಳುಹಿಸಬಹುದಾಗಿದೆ.

ಅಭಿಮಾನಿಗಳು ಕಳುಹಿಸಿದ ವಿಡಿಯೋ ಚಿತ್ರ ತಂಡಕ್ಕೆ ಇಷ್ಟವಾದಲ್ಲಿ ಸಿನಿಮಾದಲ್ಲಿ ಅದನ್ನು ಬಳಸಿಕೊಳ್ಳಲು ಚಿತ್ರ ತಂಡ ನಿರ್ಧರಿಸಿರುವುದಾಗಿ ಸಚಿನ್​ ತಿಳಿಸಿದ್ದಾರೆ. 

ಈ ಮೂಲಕ ಅಭಿಮಾನಿಗಳು ಕೂಡ ಸಚಿನ್​ ಕುರಿತದ ರೋಚಕ ಮಾಹಿತಿ ವಿಡಿಯೋವನ್ನು ಹಂಚಿಕೊಳ್ಳಬಹುದೆಂದು ಸಚಿನ್ ಟ್ವೀಟ್​ ಮಾಡಿದ್ದಾರೆ.

Scroll to load tweet…