ಮುಂಬೈ(ಅ.15): ಹೈದರಾಬಾದ್ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿಯನ್ನ ತಬ್ಬಿಕೊಳ್ಳಲು ಅಭಿಮಾನಿ ಮೈದಾನಕ್ಕೆ ನುಗ್ಗಿದ ಘಟನೆ ನಡೆದಿತ್ತು. ಇದೀಗ  ವಿಜಯ್ ಹಜಾರೆ ಟೂರ್ನಿಯಲ್ಲಿ ರೋಹಿತ್ ಶರ್ಮಾ ಇದೇ ಪರಿಸ್ಥಿತಿ ಎದುರಿಸಿದ್ದಾರೆ.

ಮುಂಬೈ ಹಾಗೂ ಬಿಹಾರ ನಡುವಿನ ವಿಜಯ್ ಹಜಾರೆ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯ ನಡೆಯುತ್ತಿದ್ದ  ವೇಳೆ ಅಭಿಮಾನಿಯೊರ್ವ ಭದ್ರತಾ ಸಿಬ್ಬಂಧಿ ಕಣ್ತಪ್ಪಿ ಮೈದಾನಕ್ಕೆ ನುಗ್ಗಿದ್ದಾನೆ. ಇಷ್ಟೇ ರೋಹಿತ್ ಕಾಲು ಮುಟ್ಟಿ ನಮಸ್ಕರಿಸಿದ ಅಭಿಮಾನಿ ನೇರವಾಗಿ ರೋಹಿತ್ ಬಿಗಿದಪ್ಪಿ ಮುತ್ತಿಕ್ಕಿದ್ದಾನೆ.

 

 

ಒಂದು ಕಿಸ್ ನೀಡಿ ಸುಮ್ಮನಾಗದ ಅಭಿಮಾನಿ ಮತ್ತೊಂದು ಮುತ್ತಿಗೆ ಪ್ರಯತ್ನಿಸಿದ್ದಾರೆ.  ಅಷ್ಟರಲ್ಲೇ ರೋಹಿತ್ ಶರ್ಮಾ ಅಭಿಮಾನಿಯಿಂದ ಹೇಗೋ ಬಿಡಿಸಿಕೊಂಡ ದೂರ ಸರಿದಿದ್ದಾರೆ.  ಮೈದಾನಕ್ಕೆ ಭದ್ರತಾ ಸಿಬ್ಬಂಧಿ ದಾವಿಸುತ್ತಿದ್ದಂತೆ ಅಭಿಮಾನಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿ ತಬ್ಬಿಕೊಂಡ ಅಭಿಮಾನಿ!

ಭಾರತ ಹಾಗೂ ವೆಸ್ಟ್ಇಂಡೀಸ್ ನಡುವಿನ ಹೈದರಾಬಾದ್ ಟೆಸ್ಟ್ ಪಂದ್ಯದ ಮೊದಲ ದಿನ ಅಭಿಮಾನಿಯೊರ್ವ ಮೈದಾನಕ್ಕಿಳಿದ ವಿರಾಟ್ ಕೊಹ್ಲಿಯನ್ನ ತಬ್ಬಿಕೊಂಡಿದ್ದ. ಇಷ್ಟೇ ಅಲ್ಲ ಕೊಹ್ಲಿ ಜೊತೆ ಸೆಲ್ಫಿ ತೆಗೆಸಿಕೊಂಡಿದ್ದ.

ಅಕ್ಟೋಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;