ಕೊಹ್ಲಿ ಕ್ರಿಕೆಟ್ ಆಡುತ್ತಿದ್ದಾಗ ಕಾಲಿಗೆ ಬಿದ್ದ ಅಭಿಮಾನಿ

Fan Breaches Security To Touch Virat Kohlis Feet
Highlights

ಆರ್'ಸಿಬಿ ನಿನ್ನೆಯ ಪಂದ್ಯದಲ್ಲಿ ದೆಲ್ಲಿ ಒಡ್ಡಿದ್ದ 181 ರನ್ನುಗಳ ಸವಾಲನ್ನು  19 ಓವರ್'ಗಳಲ್ಲಿ 5 ವಿಕೇಟುಗಳನ್ನು ಕಳೆದುಕೊಂಡು ಗುರಿ ಮುಟ್ಟಿದರು. ಕೊಹ್ಲಿ 40 ಚಂಡುಗಳಲ್ಲಿ 7 ಬೌಂಡರಿ, 3 ಸಿಕ್ಸ್'ನೊಂದಿಗೆ 70 ರನ್ ಬಾರಿಸಿದರೆ, ಸ್ಫೋಟಕ ಆಟಗಾರ ಎಬಿಡಿ 37 ಎಸೆತಗಳಲ್ಲಿ6 ಸಿಕ್ಸ್, 4 ಬೌಂಡರಿಯೊಂದಿಗೆ 72 ರನ್ ಸಿಡಿಸಿದರು. ಆರ್'ಸಿಬಿ ಡೆಲ್ಲಿ ವಿರುದ್ಧ ಗೆದ್ದರೂ ಪ್ಲೇಆಫ್ ಹಂತ ಪ್ರವೇಶಿಸುವುದು ಕಷ್ಟವಾಗಿದೆ. 

ನವದೆಹಲಿ(ಮೇ.13): ಸತತ ಸೋಲುಗಳನ್ನು ಕಾಣುತ್ತಿರುವ ಆರ್'ಸಿಬಿ ನಿನ್ನೆ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೖದಾನದಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ವಿರುದ್ಧ ಎಬಿಡಿ ಹಾಗೂ ಕೊಹ್ಲಿ ಅದ್ಭುತ ಆಟದಿಂದ ೫ ವಿಕೇಟ್'ಗಳ ಜಯಗಳಿಸಿದರು.
ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಆಟವಾಡುತ್ತಿದ್ದಾಗ ಏಕಾಏಕಿ ಮೈದಾನಕ್ಕೆ ನುಗ್ಗಿದ ಅಭಿಮಾನಿಯೊಬ್ಬ ಭದ್ರತಾಪಡೆಯಿಂದ ನುಸುಳಿ  ವಿರಾಟ್ ಕಾಲಿಗೆ ದಡಕ್ಕನೆ ಬಿದ್ದಿದ್ದಾನೆ. ಯುವಕನ ಅವಾಂತರ ಕಂಡ ಬೆಂಗಳೂರು ತಂಡದ ನಾಯಕ ಒಂದು ಕ್ಷಣ ಗಾಬರಿಯದರು. ನಂತರ ಎದ್ದ ಆ ಯುವಕ ಸೆಲ್ಫಿ ತೆಗೆದುಕೊಂಡ. ಕೆಲವು ಸೆಂಕೆಡುಗಳಲ್ಲಿ ಆಗಮಿಸಿದ ಭದ್ರತಾ ಸಿಬ್ಬಂದಿ ಯುವಕನನ್ನು ತಮ್ಮ ವಶಕ್ಕೆ ಪಡೆದುಕೊಂಡರು.
ಆರ್'ಸಿಬಿ ನಿನ್ನೆಯ ಪಂದ್ಯದಲ್ಲಿ ದೆಲ್ಲಿ ಒಡ್ಡಿದ್ದ 181 ರನ್ನುಗಳ ಸವಾಲನ್ನು  19 ಓವರ್'ಗಳಲ್ಲಿ 5 ವಿಕೇಟುಗಳನ್ನು ಕಳೆದುಕೊಂಡು ಗುರಿ ಮುಟ್ಟಿದರು. ಕೊಹ್ಲಿ 40 ಚಂಡುಗಳಲ್ಲಿ 7 ಬೌಂಡರಿ, 3 ಸಿಕ್ಸ್'ನೊಂದಿಗೆ 70 ರನ್ ಬಾರಿಸಿದರೆ, ಸ್ಫೋಟಕ ಆಟಗಾರ ಎಬಿಡಿ 37 ಎಸೆತಗಳಲ್ಲಿ6 ಸಿಕ್ಸ್, 4 ಬೌಂಡರಿಯೊಂದಿಗೆ 72 ರನ್ ಸಿಡಿಸಿದರು. ಆರ್'ಸಿಬಿ ಡೆಲ್ಲಿ ವಿರುದ್ಧ ಗೆದ್ದರೂ ಪ್ಲೇಆಫ್ ಹಂತ ಪ್ರವೇಶಿಸುವುದು ಕಷ್ಟವಾಗಿದೆ. ಇನ್ನು 3 ಪಂದ್ಯಗಳು ಬಾಕಿಯುಳಿದುಕೊಂಡಿದ್ದು ಮೂರನ್ನು ಗೆದ್ದರೂ ಅಂತಿಮ 4ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುಲು ಹೆಣಗಬೇಕಿದೆ.

 

 

 

loader