2003 ಹಾಗೂ 2007ರ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದ ಬ್ರಾಡ್ ಹಾಗ್ '2007-08ರಲ್ಲಿ ಆಂದ್ರಿಯಾ ಹಾಗೂ ನನ್ನ ಸಂಬಂಧ ಮುರಿದು ಬೀಳುವ ಹಂತದಲ್ಲಿತ್ತು ಹೀಗಾಗಿ ಕ್ರಿಕೆಟ್'ನ ಎಲ್ಲಾ ವಿಭಾಗಗಳಿಂದ ನಿವೃತ್ತಿ ಪಡೆಯುವುದನ್ನು ಹೊರರತುಪಡಿಸಿ ನನ್ನೆದುರು ಬೇರೆ ದಾರಿ ಇರಲಿಲ್ಲ' ಎಂದಿದ್ದಾರೆ. ತನ್ನ ಆತ್ಮಕೃತಿ 'ದ ರಾಂಗ್ ಅನ್'ನಲ್ಲಿ ಮಾಜಿ ಪತ್ನಿಯೊಂದಿಗಿನ ಸಂಬಂಧ ಮುರಿದ ನಂತರದ 3 ವರ್ಷಗಳನ್ನು ಅವರು ಯಾವ ರೀತಿ ಕಳೆದರು ಎಂಬುವುದನ್ನು ತಿಳಿಸಿದ್ದಾರೆ. ಆ ವಿಚಾರ ತನ್ನನ್ನು ಹೇಗೆ ಮಧ್ಯಪಾನ ಸೇವಿಸಲು ಪ್ರೇರೇಪಿಸಿತು ಎಂಬುವುದನ್ನೂ ಇಲ್ಲಿ ತಿಳಿಸಿದ್ದಾರೆ.

ಸಿಡ್ನಿ(ಅ.01): ಆಸ್ಟ್ರೇಲಿಯಾದ ಮಾಜಿ ಟೆಸ್ಟ್ ಸ್ಪಿನ್ನರ್ ಬ್ರಾಡ್ ಹಾಗ್ ಬಿಡುಗಡೆಗೊಳಿಸಿದ ತನ್ನ ಹೊಸ ಕೃತಿಯಲ್ಲಿ ಕ್ರಿಕೆಟ್ ಜಗತ್ತಿನಿಂದ ನಿವೃತ್ತಿ ಪಡೆದ ಬಳಿಕ ಹಾಗೂ ತನ್ನ ವೈವಾಹಿಕ ಸಂಬಂಧ ಮುರಿದು ಬಿದ್ದ ಸಂದರ್ಭದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದೆ ಎಂದು ಬರೆದುಕೊಂಡಿದ್ದಾರೆ.

2003 ಹಾಗೂ 2007ರ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ಸದಸ್ಯರಾಗಿದ್ದ ಬ್ರಾಡ್ ಹಾಗ್ '2007-08ರಲ್ಲಿ ಆಂದ್ರಿಯಾ ಹಾಗೂ ನನ್ನ ಸಂಬಂಧ ಮುರಿದು ಬೀಳುವ ಹಂತದಲ್ಲಿತ್ತು ಹೀಗಾಗಿ ಕ್ರಿಕೆಟ್'ನ ಎಲ್ಲಾ ವಿಭಾಗಗಳಿಂದ ನಿವೃತ್ತಿ ಪಡೆಯುವುದನ್ನು ಹೊರರತುಪಡಿಸಿ ನನ್ನೆದುರು ಬೇರೆ ದಾರಿ ಇರಲಿಲ್ಲ' ಎಂದಿದ್ದಾರೆ. ತನ್ನ ಆತ್ಮಕೃತಿ 'ದ ರಾಂಗ್ ಅನ್'ನಲ್ಲಿ ಮಾಜಿ ಪತ್ನಿಯೊಂದಿಗಿನ ಸಂಬಂಧ ಮುರಿದ ನಂತರದ 3 ವರ್ಷಗಳನ್ನು ಅವರು ಯಾವ ರೀತಿ ಕಳೆದರು ಎಂಬುವುದನ್ನು ತಿಳಿಸಿದ್ದಾರೆ. ಆ ವಿಚಾರ ತನ್ನನ್ನು ಹೇಗೆ ಮಧ್ಯಪಾನ ಸೇವಿಸಲು ಪ್ರೇರೇಪಿಸಿತು ಎಂಬುವುದನ್ನೂ ಇಲ್ಲಿ ತಿಳಿಸಿದ್ದಾರೆ.

ಈ ಕುರಿತಾಗಿ ಮಾತನಾಡಿದ ಬ್ರಾಡ್ 'ನಾನು ಸಮುದ್ರ ದಂಡೆಯಲ್ಲಿ ಕಾರ್ ಪಾರ್ಕ್ ಮಾಡಿ ವಾಕಿಂಗ್'ಗೆ ತೆರಳಿದ್ದೆ. ಈ ವೇಳೆ ನಾನು ಸಮುದ್ರಕ್ಕೆ ಹಾರಬೇಕು. ಬದುಕಿದರೆ ಉಳಿದುಕೊಳ್ಳುತ್ತೇನೆ, ಇಲ್ಲದಿದ್ದರೆ ಸಾಯುತ್ತೇನೆ. ಎಲ್ಲವನ್ನೂ ನನ್ನ ಅದೃಷ್ಟದ ಮೇಲೆ ಬಿಟ್ಟುಬಿಡುತ್ತೇನೆ ಎಂಬ ಯೋಚನೆ ಬಂದಿತ್ತು. ಇದೇ ರೀತಿ ನಾಲ್ಕು ಬಾರಿ ಯೋಚಿಸಿದ್ದೆ ಆದರೆ ನನಗೆ ಹಾರುವ ಧೈರ್ಯ ಬರಲಿಲ್ಲ' ಎಂದಿದ್ದಾರೆ.