ಇದು ಸುಳ್‌ಸುದ್ದಿ:  ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ಸೋಲಿಗೆ ಡಕ್‌ವರ್ತ್ ನಿಯಮವೇ ಕಾರಣ ಅನ್ನೋದು ಅಭಿಮಾನಿಗಳ ಆರೋಪ. ಇದೀಗ ಡಕ್‌ವರ್ತ್ ನಿಯಮದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.

ಸುಳ್‌ಸುದ್ದಿ(ನ.22): ಆಸ್ಪ್ರೇಲಿಯಾ ವಿರುದ್ಧದ ಮೊದಲ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಭಾರತದ ಸೋಲಿಗೆ ಕಾರಣರಾದ ಡಕ್‌ವರ್ತ್ ಮತ್ತು ಲೂಯಿಸ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ತಿಳಿಸಿದ್ದಾರೆ. 

ಭಾರತ ಹೆಚ್ಚು ರನ್‌ ಗಳಿಸಿದ್ದರೂ ಡಕ್‌ವರ್ತ್ ಲೂಯಿಸ್‌ ನಿಯಮದಿಂದಾಗಿ ಆಸ್ಪ್ರೇಲಿಯಾ ಗೆದ್ದಿದೆ. ಇದು ಭಾರತೀಯ ಕ್ರಿಕೆಟ್‌ಗೆ ಮಾರಕವಾಗಿ ಪರಿಣಮಿಸಿದೆ. ಹೀಗಾಗಿ ಆದಷ್ಟುಶೀಘ್ರ ಡಕ್‌ವತ್‌ರ್‍ ಮತ್ತು ಲೂಯಿಸ್‌ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸುಳ್‌ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. 

ಈ ಹಿಂದೆ ವಿಜಯ್‌ ಮಲ್ಯ, ನೀರವ್‌ ಮೋದಿ, ಲಲಿತ್‌ ಮೋದಿ, ದಾವೂದ್‌ ಇಬ್ರಾಹಿಂ, ಚೋಟಾ ರಾಜನ್‌, ಹಫೀಜ್‌ ಸಯೀದ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜನಾಥ್‌ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.