ಡುಪ್ಲೆಸಿಸ್ ಕ್ಯಾಚ್ ಹಿಡಿಯುವಾಗಿನ ಚುರುಕುತನ ನೋಡಿದರೆ ಮತ್ತೊಬ್ಬ ಜಾಂಟಿ ರೋಡ್ಸ್ ಆಗಲಿದ್ದಾರಾ ಎನ್ನುವ ಅನುಮಾನ ಮೂಡತ್ತಿದೆ..   

ನವದೆಹಲಿ(ಫೆ.09): ಕ್ರಿಕೆಟ್ ಜಗತ್ತಿನಲ್ಲಿ ಕ್ಷೇತ್ರರಕ್ಷಣಾ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ ತಂಡ ತನ್ನದೇ ಆದ ಛಾಪು ಮೂಡಿಸಿದೆ. ಅದರಲ್ಲೂ ಜಾಂಟಿ ರೋಡ್ಸ್ ಅವರಂಥಹ ಶ್ರೇಷ್ಟ ಕ್ಷೇತ್ರರಕ್ಷಕನನ್ನು ನೀಡಿದ ಖ್ಯಾತಿ ಹರಿಣಗಳ ದೇಶಕ್ಕೆ ಸಲ್ಲುತ್ತದೆ. ಹರ್ಷಲ್ ಗಿಬ್ಸ್ ಅವರಿಂದ ಹಿಡಿದು ಎಬಿ ಡಿವಿಲಿಯರ್ಸ್ ವರೆಗೂ ಕ್ಷೇತ್ರ ರಕ್ಷಣೆ ಮೂಲಕವೇ ತಂಡಕ್ಕೆ ಗಣನೀಯ ಸೇವೆ ಸಲ್ಲಿಸುತ್ತಲೇ ಬಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಪಟ್ಟಿಗೆ ಹೊಸ ಸೇರ್ಪಡೆ ಎಂಬಂತೆ ಫಾಪ್ ಡುಪ್ಲೆಸಿಸ್ ಒಂದೇ ಕೈನಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಡುಪ್ಲೆಸಿಸ್ ಕ್ಯಾಚ್ ಹಿಡಿಯುವಾಗಿನ ಚುರುಕುತನ ನೋಡಿದರೆ ಮತ್ತೊಬ್ಬ ಜಾಂಟಿ ರೋಡ್ಸ್ ಆಗಲಿದ್ದಾರಾ ಎನ್ನುವ ಅನುಮಾನ ಮೂಡುತ್ತಿದೆ..