ಲಂಡನ್‌[ಮೇ.28]: ಐಸಿಸಿ ಏಕದಿನ ವಿಶ್ವಕಪ್‌ ಆರಂಭಕ್ಕೆ ಕೇವಲ 2 ದಿನ ಬಾಕಿ ಇದ್ದು, ಆತಿಥೇಯ ಇಂಗ್ಲೆಂಡ್‌ ತಂಡಕ್ಕೆ ಎದುರಾಗಿದ್ದ ಆತಂಕ ದೂರಗೊಂಡಿದೆ. 

ವಿಶ್ವಕಪ್ ಟೂರ್ನಿಯ ಸಂಪೂರ್ಣ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ...

ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದ ನಾಯಕ ಇಯಾನ್‌ ಮಾರ್ಗನ್‌ ಹಾಗೂ ಹಿಮ್ಮಡಿ ಗಾಯಕ್ಕೆ ತುತ್ತಾಗಿದ್ದ ವೇಗದ ಬೌಲರ್‌ ಮಾರ್ಕ್ ವುಡ್‌, ಮೇ 30ರಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಉದ್ಘಾಟನಾ ಪಂದ್ಯಕ್ಕೆ ಫಿಟ್‌ ಆಗಲಿದ್ದಾರೆ ಎಂದು ತಂಡದ ವಕ್ತಾರ ಸೋಮವಾರ ತಿಳಿಸಿದ್ದಾರೆ.

1 ಲಕ್ಷ ಮಹಿಳೆಯರಿಂದ ವಿಶ್ವಕಪ್‌ ಟಿಕೆಟ್‌ ಖರೀದಿ!

ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿರುವ ಇಂಗ್ಲೆಂಡ್ ತಂಡ ಚೊಚ್ಚಲ ವಿಶ್ವಕಪ್ ಜಯಿಸುವ ಕನವರಿಕೆಯಲ್ಲಿದೆ. ಜಗತ್ತಿಗೆ ಕ್ರಿಕೆಟ್ ಪಾಠ ಹೇಳಿಕೊಟ್ಟಿರುವ ಇಂಗ್ಲೆಂಡ್ ಈ ಬಾರಿ ವಿಶ್ವಕಪ್ ಜಯಿಸುತ್ತಾ ಎನ್ನುವುದನ್ನು ಇನ್ನಷ್ಟೇ ಕಾದು ನೋಡಬೇಕಿದೆ.