ವಿನೂತನ ಕ್ರಿಕೆಟ್ ಶಾಟ್ ಅನ್ನ ಕಂಡು ಹಿಡಿದ ಆ ಮಹಿಳಾ ಕ್ರಿಕೆಟರ್ ಬೇಱರು ಅಲ್ಲ ಇಂಗ್ಲೆಂಡ್ ತಂಡದ ಆಲ್ರೌಂಡರ್ ನಟಾಲಿಯಾ ಸಿವರ್. ಮೊನ್ನೆ ನ್ಯೂಜಿಲೆಂಡ್ ವಿರುದ್ಧ ನಡೆದ ಮಹಿಳಾ ವಿಶ್ವಕಪ್ನ ಲೀಗ್ ಪಂದ್ಯದಲ್ಲಿ ಸಿವರ್ ಈ ಹೊಡೆತವನ್ನ ಪರಿಚಯಿಸಿದ್ರು. ಅದನ್ನ ನೋಡಿದ ಕ್ರಿಕೆಟ್ ಪಂಡಿತರು ಈ ವಿನೂತನ ಹೊಡೆತಕ್ಕೆ ನಟ್'ಮೆಗ್ ಶಾಟ್ ಅಂತ ಹೆಸರಿಟ್ಟಿದ್ದಾರೆ. ಅಷ್ಟಕ್ಕೂ ಆ ಶಾಟ್ ಹೇಗಿರುತ್ತೆ ನೀವೇ ನೋಡಿ.
ಕ್ರಿಕೆಟ್ ಎನ್ನುವುದೇ ಒಂದು ರೀತಿ ಪ್ರಯೋಗಾಲಯ. ದಿನಕ್ಕೊಂದು ಹೊಡೆತಗಳು. ದಿನಕ್ಕೊಂದು ಬೌಲಿಂಗ್ ಸ್ಟೈಲ್'ಗಳು ಕ್ರಿಕೆಟ್ ಜಗತ್ತಿನಲ್ಲಿ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಆದರೆ ಈ ಪ್ರಯೋಗಗಳು ಕೇವಲ ಪುರುಷ ಕ್ರಿಕೆಟ್'ನಲ್ಲಿ ಮಾತ್ರ ಕಾಣಸಿಗುತ್ತಿತ್ತು. ಅದಕ್ಕೆ ಉತ್ತಮ ಉದಾಹರಣೆ ವೀರೇಂದ್ರ ಸೆಹ್ವಾಗ್'ರ ಅಪ್ಪರ್ ಕಟ್, ತಿಲಕರತ್ನೆ ದಿಲ್ಶಾಣ್ ಅವರ ದಿಲ್ಸ್ಕೂಪ್, ಡೇವಿಡ್ ವಾರ್ನರ್'ರ ಸ್ವಿಚ್ ಹಿಟ್, ಧೋನಿಯ ಹೆಲಿಕಾಪ್ಟರ್ ಶಾಟ್. ಇವೆಲ್ಲಾ ಕ್ರಿಕೆಟ್'ಗೆ ಬಂದ ಹೊಸ ಆವಿಶ್ಕಾರದ ಹೊಡೆತಗಳು.
ಇವೆಲ್ಲಾ ಶಾಟ್ಗಳಲ್ಲಿ ಒಂದು ಕಾಮನ್ ಥಿಂಗ್ ಇದೆ. ಅದು ಈ ಹೊಡೆತಗಳನ್ನೆಲ್ಲಾ ಪರಿಚಯಿಸಿದ್ದು ಪುರುಷ ಕ್ರಿಕೆಟರ್'ಗಳು. ಕ್ರಿಕೆಟ್'ನ್ನು ಆಳುತ್ತಿರುವ ಪುರುಷರು ಹೊಸ ಆವಿಷ್ಕಾರಗಳನ್ನು ಪರಿಚಯಿಸುವುದರಲ್ಲಿ ಎತ್ತಿದ ಕೈ. ಸದ್ಯ ಮತ್ತೊಂದು ಹೊಸ ಶಾಟ್ ಕ್ರಿಕೆಟ್ ಲೋಕಕ್ಕೆ ಎಂಟ್ರಿ ಕೊಟ್ಟಿದೆ. ಆದರೆ ಟ್ವಿಸ್ಟ್ ಏನ್ ಗೊತ್ತಾ? ಈ ವಿನೂತನ ಹೊಡೆತವನ್ನ ಪರಿಚಯಿಸಿರೋದು ಪುರುಷ ಕ್ರಿಕೆಟರ್ ಅಲ್ಲ ಬದಲಿಗೆ ಲೇಡಿ ಕ್ರಿಕೆಟರ್.
ವಿನೂತನ ಹೊಡೆತ ಕಂಡು ಹಿಡಿದ ಆ ಲೇಡಿ ಕ್ರಿಕೆಟರ್ ಯಾರು.?
ವಿನೂತನ ಕ್ರಿಕೆಟ್ ಶಾಟ್ ಅನ್ನ ಕಂಡು ಹಿಡಿದ ಆ ಮಹಿಳಾ ಕ್ರಿಕೆಟರ್ ಬೇಱರು ಅಲ್ಲ ಇಂಗ್ಲೆಂಡ್ ತಂಡದ ಆಲ್ರೌಂಡರ್ ನಟಾಲಿಯಾ ಸಿವರ್. ಮೊನ್ನೆ ನ್ಯೂಜಿಲೆಂಡ್ ವಿರುದ್ಧ ನಡೆದ ಮಹಿಳಾ ವಿಶ್ವಕಪ್ನ ಲೀಗ್ ಪಂದ್ಯದಲ್ಲಿ ಸಿವರ್ ಈ ಹೊಡೆತವನ್ನ ಪರಿಚಯಿಸಿದ್ರು. ಅದನ್ನ ನೋಡಿದ ಕ್ರಿಕೆಟ್ ಪಂಡಿತರು ಈ ವಿನೂತನ ಹೊಡೆತಕ್ಕೆ ನಟ್'ಮೆಗ್ ಶಾಟ್ ಅಂತ ಹೆಸರಿಟ್ಟಿದ್ದಾರೆ. ಅಷ್ಟಕ್ಕೂ ಆ ಶಾಟ್ ಹೇಗಿರುತ್ತೆ ನೀವೇ ನೋಡಿ.
ನಟ್ಮೆಗ್ ಅಂದ್ರೆ ಏನು.?
ಈ ಅದ್ಭುತ ಹೊಡೆತಕ್ಕೆ ನಟ್'ಮೆಗ್ ಎಂದು ಹೆಸರು ಇಡಲು ಪ್ರೇರಣೆ ಫುಟ್'ಬಾಲ್. ಹೌದು ಫುಟ್'ಬಾಲ್ ಆಟದಲ್ಲಿ ಆಟಗಾರ ಬಾಲನ್ನು ವಿರೋಧಿ ಆಟಗಾರನ ಕಾಲ ಮಧ್ಯೆ ಒದ್ದು ಆತನನ್ನ ವಂಚಿಸಿ ಚಾಕ್ಯತೆ ಇಂದ ಬಾಲ್ ಅನ್ನ ಗೋಲ್ ಕಡೆಗೆ ಕರೆದೊಯ್ಯುವುದಕ್ಕೆ ನಟ್'ಮೆಗ್ ಎಂದು ಕರೆಯುತ್ತಾರೆ.
ಅದೇ ರೀತಿ ನಟಾಲಿಯಾ ಸಿವರ್ ತಮ್ಮ ಎರಡು ಕಾಲುಗಳ ಮಧ್ಯೆ ಬಾಲನ್ನು ಬಾರಿಸಿ ಚಾಕ್ಯತೆ ಇಂದ ಬಾಲನ್ನ ಬೌಂಡರಿ ಗೆರೆಗೆ ದಾಟಿಸಿದ್ದರು. ಹೀಗಾಗಿ ಇದಕ್ಕೆ ನಟ್'ಮೆಗ್ ಎಂದು ಹೆಸರು ಬಂತು.
ಒಟ್ಟಿನಲ್ಲಿ ಈ ವಿನೂತನ ಶಾಟ್ ಸದ್ಯ ಯುವ ಕ್ರಿಕೆಟಿಗರ ಮನಗೆದ್ದಿದೆ. ಎಲ್ಲರೂ ಈ ಹೊಸ ಹೊಡೆತವನ್ನ ಟ್ರೈ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಪರುಷ ಪ್ರಧಾನವಾದ ಕ್ರಿಕೆಟ್'ನಲ್ಲಿ ಮಹಿಳೆಯೊಬ್ಬಳ ಈ ಕೊಡುಗೆ ಎಲ್ಲರ ಹೃದಯ ಗೆದ್ದಿದೆ.