ಮಹಿಳೆಯರ ಟಿ20: ಭಾರತದ ವಿರುದ್ಧ ಇಂಗ್ಲೆಂಡ್'ಗೆ ಜಯ, ಮಿಥಾಲಿ, ಮಂದನಾ ಆಟ ವ್ಯರ್ಥ

England Women win by 7 Wickets
Highlights

ಆರಂಭಿಕ ಆಟಗಾರರಾದ ಮಿಥಾಲಿ ರಾಜ್ ಹಾಗೂ ಸ್ಮೃತಿ ಮಂದಾನ ಬಿರುಸಿನ ಅರ್ಧ ಶತಕದೊಂದಿಗೆ ಮೊದಲ ವಿಕೇಟ್ ಜೊತೆಯಾಟದಲ್ಲಿ  12.5 ಓವರ್'ಗಳಲ್ಲಿ 129 ರನ್ ಪೇರಿಸಿದರು.

ಮುಂಬೈ(ಮಾ.25): ತ್ರಿಕೋನ ಸರಣಿಯ ಟಿ20 ಪಂದ್ಯದಲ್ಲಿ ಭಾರತ ಮಹಿಳೆಯರ ತಂಡ ಮತ್ತೆ ಮುಗ್ಗರಿಸಿದ್ದು, ಡಿ'ಎನ್ ವ್ಯಾಟ್ ಅವರ ಆಕರ್ಷಕ ಶತಕದ ನೆರವಿನೊಂದಿಗೆ  ಇಂಗ್ಲೆಂಡ್ ತಂಡ ಭಾರತದ ವಿರುದ್ಧ 7 ವಿಕೇಟ್'ಗಳ ಜಯ ಸಾಧಿಸಿದೆ.
ಭಾರತದ ವನಿತೆಯರು ಒಡ್ಡಿದ 198 ರನ್'ಗಳನ್ನು ಇಂಗ್ಲೆಂಡ್ ತಂಡ 18.4 ಓವರ್'ಗಳಲ್ಲಿ ಗುರಿ ಮುಟ್ಟಿದೆ. ಟಾಸ್ ಗೆದ್ದ ಆಂಗ್ಲರ ಪಡೆಯ ನಾಯಕಿ ನೈಟ್ ಭಾರತ ತಂಡಕ್ಕೆ ಬ್ಯಾಟಿಂಗ್ ಆಹ್ವಾನಿಸಿದರು. ಆರಂಭಿಕ ಆಟಗಾರರಾದ ಮಿಥಾಲಿ ರಾಜ್ ಹಾಗೂ ಸ್ಮೃತಿ ಮಂದಾನ ಬಿರುಸಿನ ಅರ್ಧ ಶತಕದೊಂದಿಗೆ ಮೊದಲ ವಿಕೇಟ್ ಜೊತೆಯಾಟದಲ್ಲಿ  12.5 ಓವರ್'ಗಳಲ್ಲಿ 129 ರನ್ ಪೇರಿಸಿದರು. ಮಂದಾನ 40 ಚಂಡುಗಳಲ್ಲಿ 12 ಬೌಂಡರಿ, 2 ಸಿಕ್ಸ್'ರ್'ನೊಂದಿಗೆ 76 ರನ್ ಸಿಡಿಸಿದರೆ, ಮಿಥಾಲಿ 43 ಎಸೆತಗಳಲ್ಲಿ 7 ಬೌಂಡರಿಯೊಂದಿಗೆ 53 ರನ್ ಬಾರಿಸಿದರು.
ಇನ್ನುಳಿದಂತೆ ನಾಯಕಿ ಕೌರ್ (30) ಹಾಗೂ ವಸ್ತ್ರಕಾರ್ (22) ರನ್'ನೊಂದಿಗೆ ಭಾರತ ತಂಡ 20 ಓವರ್'ಗಳಲ್ಲಿ  4 ವಿಕೇಟ್ ನಷ್ಟಕ್ಕೆ 198 ರನ್ ಕಲೆ ಹಾಕಿದರು.
ವ್ಯಾಟ್ ಆಕರ್ಷಕ ಶತಕ        
199 ರನ್ ಸವಾಲಿನ ಗುರಿಯನ್ನು ಬೆನ್ನಟ್ಟಿದ್ದ ಇಂಗ್ಲೆಂಡ್ ವನಿತೆಯರು 5ನೇ ಓವರ್'ನಲ್ಲಿಯೇ ಆರಂಭಿಕ ಆಟಗಾರ್ತಿ ಮೊದಲ ವಿಕೇಟ್ ಕಳೆದುಕೊಂಡು ಸಂಕಷ್ಟಕ್ಕೆ ಈಡಾದರೂ ವ್ಯಾಟ್ (125) ಅವರ ಭರ್ಜರಿ ಶತಕ ಹಾಗೂ ಬ್ಯೂಮಾಂಟ್ (35) ಅವರ ಸಮಯೋಚಿತ ಆಟದ ನೆರವಿನಿಂದ  18.4 ಓವರ್'ಗಳಲ್ಲಿ  ಆಟ ಮುಗಿಸಿದರು.

ಸ್ಕೋರ್ ವಿವರ

ಭಾರತ ಮಹಿಳೆಯರು 20 ಓವರ್'ಗಳಲ್ಲಿ 198/4
(ಮಿಥಾಲಿ ರಾಜ್ 53, ಮಂದಾನಾ 76)

ಇಂಗ್ಲೆಂಡ್ 18.4 ಓವರ್'ಗಳಲ್ಲಿ  199/3
(ವ್ಯಾಟ್ 125, ಬ್ಯೂಮಾಂಟ್  35 )

ಫಲಿತಾಂಶ : ಇಂಗ್ಲೆಂಡ್'ಗೆ 7 ವಿಕೇಟ್ ಜಯ

ಪಂದ್ಯ ಶ್ರೇಷ್ಠ: ವ್ಯಾಟ್

 

loader