ಒಂದೇ ದಿನ ಒಂದೇ ತಂಡದ ವಿರುದ್ಧ ಎರಡು ತಂಡಗಳು ಅಬ್ಬರಿಸಿವೆ. ಟಿ-20 ಯ ಅತಿ ಹೆಚ್ಚಿನ ಮೊತ್ತ ದಾಖಲೆ ನಿರ್ಮಾಣವಾದ ಕೆಲವೇ ಗಂಟೆಗಳಲ್ಲಿ ಅಳಿಸಿ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಈ ಎಲ್ಲ ದಾಖಲೆಗಳ ದಿನಕ್ಕೆ ಸಾಕ್ಷಿಯಾಗಿದ್ದು ಇಂಗ್ಲೆಂಡ್-ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ವನಿತೆಯರ ಟಿ-20 ಸರಣಿ.
ಲಂಡನ್ [ಜೂ.21] ಒಂದೇ ದಿನ ಒಂದೇ ತಂಡದ ವಿರುದ್ಧ ಎರಡು ತಂಡಗಳು ಅಬ್ಬರಿಸಿವೆ. ಟಿ-20 ಯ ಅತಿ ಹೆಚ್ಚಿನ ಮೊತ್ತ ದಾಖಲೆ ನಿರ್ಮಾಣವಾದ ಕೆಲವೇ ಗಂಟೆಗಳಲ್ಲಿ ಅಳಿಸಿ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಈ ಎಲ್ಲ ದಾಖಲೆಗಳ ದಿನಕ್ಕೆ ಸಾಕ್ಷಿಯಾಗಿದ್ದು ಇಂಗ್ಲೆಂಡ್-ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ವನಿತೆಯರ ಟಿ-20 ಸರಣಿ.
ಇಲ್ಲಿ ದಂಡನೆಗೆ ಗುರಿಯಾಗಿದ್ದು ಮಾತ್ರ ದಕ್ಷಿಣ ಆಫ್ರಿಕಾ. ಅತ್ತ ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ ಬರೋಬ್ಬರಿ 481 ರನ್ ಬಾರಿಸಿ ದಾಖಲೆಗೆ ಪಾತ್ರರಾಗಿದ್ದ ಪುರುಷರಿಗೆ ನಾವೇನು ಕಡಿಮೆ ಇಲ್ಲ ಎಂದು ಇಂಗ್ಲೆಂಡ್ ವನಿತೆಯರು ಅಬ್ಬರಿಸಿದ್ದಾರೆ. ಟಿ-20ಯಲ್ಲಿ 250 ರನ್ ಕಲೆ ಹಾಕಿದ ಇಂಗ್ಲೆಂಡ್ ಹೊಸ ದಾಖಲೆ ಬರೆದಿದೆ.
ಮೊದಲಿನ ಪಂದ್ಯದಲ್ಲಿ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 216 ರನ್ ಪೇರಿಸಿತ್ತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 6 ವಿಕೆಟ್ ನಷ್ಟಕ್ಕೆ 150 ರನ್‌ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು. ಇದಾದ ಕೆಲವೆ ಗಂಟೆಗಳಲ್ಲಿ ನಡೆದ ಪಂದ್ಯ ಮತ್ತಷ್ಟು ಮನರಂಜನೆ ನೀಡಿತು. ಇಂಗ್ಲೆಂಡ್ ಪರ ಬಿಅಮೌಂಟ್ 52 ಎಸೆತದಲ್ಲಿ 116 ರನ್ ಬಾರಿಸಿದರೆ ಕಾರ್ತೇಯನ್ ಬರ್ನ್ಟ್ ಕೇವಲ 16 ಎಸೆತಗಳಲ್ಲಿ 42 ರನ್ ಸಿಡಿಸಿದರು. ಗುರಿ ಬೆನ್ನತ್ತಿದ ಆಫ್ರಿಕಾ 6 ವಿಕೆಟ್ ಕಳೆದುಕೊಂಡು 129 ರನ್ ಗಳಿಸಿ ಶರಣಾಯಿತು.
