ಕಾರ್ಡಿಫ್[ಜು.06]: ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ದುಕೊಂಡಿದೆ.

ಭಾರತ ಯಾವುದೇ ಬದಲಾವಣೆಗಳಿಲ್ಲದೇ ಕಣಕ್ಕಿಳಿದರೆ, ಇಂಗ್ಲೆಂಡ್ ತಂಡ ಒಂದು ಬದಲಾವಣೆ ಮಾಡಿದೆ. ಜಾಕ್ ಬಾಲ್ ಇಂದು ಇಂಗ್ಲೆಂಡ್ ಪರ ಟಿ20 ತಂಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮೊಯಿನ್ ಅಲಿ ಬದಲಿಗೆ ಜಾಕ್ ಬಾಲ್’ಗೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಮ ವೇಗದ ಬೌಲರ್ ಆಗಿರುವ ಜಾಕ್ ಬಾಲ್ ಚೊಚ್ಚಲ ಪಂದ್ಯದಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಈಗಾಗಲೇ 1-0 ಮುನ್ನಡೆ ಕಾಯ್ದುಕೊಂಡಿದ್ದು, ಈ ಪಂದ್ಯವನ್ನು ಗೆದ್ದರೆ ಇನ್ನೊಂದು ಪಂದ್ಯವಿರುವಾಗಲೇ ಸರಣಿ ಕೈವಶ ಮಾಡಿಕೊಂಡಂತಾಗುತ್ತದೆ. ಆದರೆ ಇಂಗ್ಲೆಂಡ್ ತವರಿನಲ್ಲಿ ಪ್ರಬಲ ತಿರುಗೇಟು ನೀಡುವ ಸಾಧ್ಯತೆಯಿದೆ.     

ತಂಡಗಳು ಹೀಗಿವೆ:

ಭಾರತ: 

ಇಂಗ್ಲೆಂಡ್: