ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಗೆದ್ದ ಟೀಂ ಇಂಡಿಯಾ ಸಂಭ್ರಮ ಆಚರಿಸಿತು. ಆದರೆ ಎಂ ಎಸ್ ಧೋನಿ ಪುತ್ರಿ ಝಿವಾ ಡ್ಯಾನ್ಸ್ ಮೂಲಕ ಟೀಂ ಇಂಡಿಯಾ ಗೆಲುವನ್ನ ಆಚರಿಸಿದ್ದಾರೆ. ಝಿವಾ ಡ್ಯಾನ್ಸ್ ಹೇಗಿದೆ? ಇಲ್ಲಿದೆ ವೀಡಿಯೋ.
ಬ್ರಿಸ್ಟಲ್(ಜು.09): ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಗೆಲುವು ಕೊಹ್ಲಿ ಸೈನ್ಯ ಮಾತ್ರವಲ್ಲ ಅಭಿಮಾನಿಗಳ ಸಂಭ್ರಮವನ್ನೂ ಇಮ್ಮಡಿಗೊಳಿಸಿದೆ. ಇಂಗ್ಲೆಂಡ್ ತಂಡವನ್ನ 2-1 ಅಂತರದಲ್ಲಿ ಮಣಿಸಿ ಸರಣಿ ವಶಪಡಿಸಿಕೊಂಡಿತ್ತು. ಈ ಗೆಲುವನ್ನ ಎಂ ಎಸ್ ಧೋನಿ ಪುತ್ರಿ ಝಿವಾ ಧೋನಿ ಭರ್ಜರಿಯಾಗಿ ಆಚರಿಸಿದ್ದಾರೆ.
ಬ್ರಿಸ್ಟಲ್‌ನಲ್ಲಿ ನಡೆದೆ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆ, ಝಿವಾ ಧೋನಿ ಮೈದಾನದಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಝಿವಾ ಡ್ಯಾನ್ಸ್ ಸಂಭ್ರಮ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ರೋಹಿತ್ ಶರ್ಮಾ ಸೆಂಚುರಿ ಹಾಗೂ ಹಾರ್ದಿಕ್ ಪಾಂಡ್ಯ ಅಬ್ಬರದಿಂದ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತ್ತು. ಈ ಮೂಲಕ ಸರಣಿ ಗೆದ್ದು ಸಂಭ್ರಮಿಸಿತ್ತು.
