ಭಾರತದ ಪರ ಶಿಸ್ತಿನ ದಾಳಿ ನಡೆಸಿದ ಜೂಲನ್ ಗೋಸ್ವಾಮಿ 3 ವಿಕೆಟ್ ಕಬಳಿಸಿದರೆ, ಪೂನಮ್ ಯಾದವ್ ಎರಡು ವಿಕೆಟ್ ಪಡೆದು ಮಿಂಚಿದರು.
ಲಾರ್ಡ್ಸ್(ಜು.23): ಭಾರತದ ಅನುಭವಿ ವೇಗದ ಬೌಲರ್ ಜೂಲನ್ ಗೋಸ್ವಾಮಿ(23/3 ಅವರ ಕರಾರುವಕ್ಕಾದ ಬೌಲಿಂಗ್ ದಾಳಿಯ ನೆರವಿನಿಂದ ಮಿಥಾಲಿ ರಾಜ್ ಪಡೆ ಇಂಗ್ಲೆಂಡ್ ತಂಡವನ್ನು 228 ರನ್'ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ.
ಲಾರ್ಡ್ಸ್'ನಲ್ಲಿ ನಡೆಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ತಂಡ ನಥಾಲಿ ಸ್ಕೀವರ್(51) ಹಾಗೂ ಶರಹ್ ಟೇಲರ್(45) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 228ರನ್'ಗಳ ಸವಾಲಿನ ಮೊತ್ತ ಕಲೆಹಾಕಿದೆ. ಕೆಳಕ್ರಮಾಂಕದಲ್ಲಿ ಚುರುಕಿನ ರನ್ ಕಲೆಹಾಕಿದ ಕ್ಯಾಥ್ರೀನ್ ಬ್ರಂಟ್ 42 ಎಸೆತಗಳಲ್ಲಿ 34ರನ್ ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.
ಭಾರತದ ಪರ ಶಿಸ್ತಿನ ದಾಳಿ ನಡೆಸಿದ ಜೂಲನ್ ಗೋಸ್ವಾಮಿ 3 ವಿಕೆಟ್ ಕಬಳಿಸಿದರೆ, ಪೂನಮ್ ಯಾದವ್ ಎರಡು ವಿಕೆಟ್ ಪಡೆದು ಮಿಂಚಿದರು. ಇನ್ನು ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್ ಮಹಿಳಾ ತಂಡ : 228/7
ನಥಾಲಿ ಸ್ಕೀವರ್ : 51
ಶರಹ್ ಟೇಲರ್ : 45
ಜೂಲನ್ ಗೋಸ್ವಾಮಿ : 23/3
ವಿವರ ಅಪೂರ್ಣ
