Asianet Suvarna News Asianet Suvarna News

ಟೀಂ ಇಂಡಿಯಾ ಗೆಲ್ಲಲು 199 ರನ್ ಟಾರ್ಗೆಟ್..! ಕೊನೆಯಲ್ಲಿ ಮಿಂಚಿದ ಪಾಂಡ್ಯ..!

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ಸಿಡಿಲಬ್ಬರದ ಆರಂಭ ಪಡೆಯಿತು. ಮೊದಲ ವಿಕೆಟ್’ಗೆ ರಾಯ್-ಬಟ್ಲರ್ ಜೋಡಿ 8 ಓವರ್’ಗಳಲ್ಲಿ ಬರೋಬ್ಬರಿ 94 ರನ್ ಚಚ್ಚಿತು. ಈ ಜೋಡಿಯನ್ನು ಸಿದ್ದಾರ್ಥ್ ಕೌಲ್ ಬೇರ್ಪಡಿಸುವಲ್ಲಿ ಸಫಲವಾದರು.

England put up a target of 199 runs for India

ಬ್ರಿಸ್ಟಾಲ್[ಜು.08]: ಆರಂಭಿಕ ಬ್ಯಾಟ್ಸ್’ಮನ್ ಜೇಸನ್ ರಾಯ್ ಆಕರ್ಷಕ ಅರ್ಧಶತಕ ಹಾಗೂ ಬಟ್ಲರ್, ಬ್ರೇಸ್ಟೋ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 198 ರನ್ ಬಾರಿಸಿದ್ದು ಟೀಂ ಇಂಡಿಯಾಗೆ ಸವಾಲಿನ ಗುರಿ ನೀಡಿದೆ. ಭಾರತ ಪರ ಹಾರ್ದಿಕ್ ಪಾಂಡ್ಯ 4 ವಿಕೆಟ್ ಕಬಳಿಸಿ ಯಶಸ್ವಿ ಬೌಲರ್ ಎನಿಸಿದ್ದಾರೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ಸಿಡಿಲಬ್ಬರದ ಆರಂಭ ಪಡೆಯಿತು. ಮೊದಲ ವಿಕೆಟ್’ಗೆ ರಾಯ್-ಬಟ್ಲರ್ ಜೋಡಿ 8 ಓವರ್’ಗಳಲ್ಲಿ ಬರೋಬ್ಬರಿ 94 ರನ್ ಚಚ್ಚಿತು. ಈ ಜೋಡಿಯನ್ನು ಸಿದ್ದಾರ್ಥ್ ಕೌಲ್ ಬೇರ್ಪಡಿಸುವಲ್ಲಿ ಸಫಲವಾದರು. ಬಟ್ಲರ್ 34 ರನ್ ಬಾರಿಸಿ ಕ್ಲೀನ್ ಬೌಲ್ಡ್ ಆದರು. ಸ್ಫೋಟಕ ಬ್ಯಾಟಿಂಗ್ ನಡೆಸಿದ ಜೇಸನ್ ರಾಯ್ ಕೇವಲ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 7 ಮನಮೋಹಕ ಸಿಕ್ಸರ್’ಗಳ ನೆರವಿನಿಂದ 67 ರನ್ ಬಾರಿಸಿ ದೀಪಕ್ ಚಾಹರ್’ಗೆ ವಿಕೆಟ್ ಒಪ್ಪಿಸಿದರು. ಚಾಹರ್ ಪದಾರ್ಪಣಾ ಪಂದ್ಯದಲ್ಲಿ ಚೊಚ್ಚಲ ವಿಕೆಟ್ ಕಬಳಿಸಿದರು. ಉಳಿದಂತೆ ಅಲೆಕ್ಸ್ ಹೇಲ್ಸ್[30], ಬೆನ್ ಸ್ಟೋಕ್ಸ್[14] ಜಾನಿ ಬ್ರೇಸ್ಟೋ[25] ಉಪಯುಕ್ತ ರನ್ ಕಾಣಿಕೆ ನೀಡುವ ಮೂಲಕ ತಂಡ ಸವಾಲಿನ ಮೊತ್ತ ಕಲೆಹಾಕಲು ನೆರವಾದರು.

ಪಂದ್ಯದ ಕೊನೆಯಲ್ಲಿ ಕಮ್’ಬ್ಯಾಕ್ ಮಾಡಿದ ಭಾರತೀಯ ಬೌಲರ್’ಗಳು ಇಂಗ್ಲೆಂಡ್ ತಂಡವನ್ನು 200 ರನ್’ಗಳೊಳಗೆ ನಿಯಂತ್ರಿಸುವಲ್ಲಿ ಸಫಲರಾದರು. ಹಾರ್ದಿಕ್ ಪಾಂಡ್ಯ 4 ವಿಕೆಟ್ ಕಬಳಿಸಿದರೆ, ಕೌಲ್ 2, ಚಾಹರ್ ಹಾಗೂ ಉಮೇಶ್ ಯಾದವ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್:

ಇಂಗ್ಲೆಂಡ್: 198/8
ರಾಯ್: 67
ಪಾಂಡ್ಯ: 38/4
[* ವಿವರ ಅಪೂರ್ಣ]

Follow Us:
Download App:
  • android
  • ios